10 ಕೋಟಿ ವಂಚಿಸಿ ಮಹಿಳೆ ಪರಾರಿ..! ಲೋನ್ ಕೊಡಿಸ್ತೀನಿ ಅಂತ ಲಕ್ಷ ಲಕ್ಷ ಪೀಕಿದ್ಲು..!
10 ಲಕ್ಷ ಲೋನ್.. 5 ಲಕ್ಷ ಸಬ್ಸಿಡಿ..!
RBIನಿಂದ ಬರುತ್ತೆ ಸಾಂಕ್ಷನ್ ಲೆಟರ್..!
10 ಕೋಟಿ ವಂಚಿಸಿ ಮಹಿಳೆ ಪರಾರಿ..!
ಆಕೆ ಬೆಂಗಳೂರಿನ ಟ್ರಸ್ಟ್ ಒಂದರ ಸದಸ್ಯೆ.ಆದ್ರೆ ಲಿಂಕ್ ಇರೋದು ಮಾತ್ರ ನ್ಯಾಷನಲ್ ಲೆವೆಲ್. ಫಿನಾನ್ಸ್ ಮಿನಿಸ್ಟರ್ ನಿರ್ಮಲಾ ಸೀತರಾಮನ್(Nirmala Sitharaman) ಈಕೆಗೆ ಡೈರೆಕ್ಟ್ ಕಾಂಟ್ಯಾಕ್ಟ್. ಇಂಥವಳು ಆವತ್ತೊಂದು ದಿನ ತನ್ನ ಜನರನ್ನ(People) ಉದ್ದಾರ ಮಾಡಲು ಪಣ ತಟ್ಟಳು.ಒಬ್ಬೊಬ್ಬರಿಗೆ ಹತ್ತತ್ತು ಲಕ್ಷ ಲೋನ್ ಕೊಡಿಸಿ ಅದರಲ್ಲಿ 5 ಲಕ್ಷ ಸಬ್ಸಿಡಿ ಕೊಡಿಸಲು ಮುಂದಾದಳು. ಇನ್ನೂ ಈಕೆ ಹೀಗೆ ಹೇಳ್ತಿದ್ದಂತೆ ಜನರೆಲ್ಲಾ ನಾಮುಂದು ತಾಮುಂದು ಅಂತ ಇವಳ ಬಳಿ ಲೋನ್(Loan) ತಗೋಳೋಗೆ ಕ್ಯೂ ನಿಂತರು. ಆದರೆ ಈಕೆ ಲೋನ್ ಕೊಡಿಸುವ ಹೊತ್ತಿಗೆ, ಅರ್ಜಿ ಹಾಕಿದವರೆಲ್ಲಾ ಲಕ್ಷ ಲಕ್ಷ ಕಳೆದುಕೊಂಡಿದ್ದರು. ನಿರ್ಮಲಾ ಸೀತರಾಮನ್ರಿಂದ ಹಿಡಿದು RBI ವರೆಗೆ ಲಿಂಕ್ ಇಟ್ಟುಕೊಂಡಿದ್ದ ಈ ಕಿಲಾಡಿ. ಮುಗ್ಧ ಜನರನ್ನ ಹೇಗೆ ವಂಚಿಸುತ್ತಿದ್ದಳು. ಇನ್ನೂ ಈಕೆಯ ಬಣ್ಣದ ಮಾತುಗಳಿಗೆ ಮರುಳಾಗಿ ಕೋಟಿ ಗಟ್ಟಲೆ ಹಣವನ್ನ ಕಳೆದುಕೊಂಡಿದ್ದಾರೆ. ಆಕೆ ತಮಿಳುನಾಡಿನ(Tamilnadu) ಹೊಸೂರು ಮೂಲದವಳು. ಆದ್ರೆ ಟಾರ್ಗೆಟ್ ಮಾತ್ರ ಅತ್ತಿಬೆಲೆ ಮತ್ತು ಆನೆಕಲ್ನ ಮುಗ್ಧ ಜನ. ಸಂಘಗಳನ್ನ ಮಾಡಿಕೊಂಡು ಅಲ್ಪಸ್ವಲ್ಪ ಹಣ ಗಳಿಸುತ್ತಿದ್ದ ಹೆಣ್ಣುಮಕ್ಕಳನ್ನೇ ಈಕೆ ಹುಡುಕುತ್ತಿದ್ದಳು. ನಂತರ ಇಲ್ಲಸಲ್ಲದ ಕಥೆಗಳನ್ನ ಹೇಳಿ ಆಸೆ ಹುಟ್ಟಿಸುತ್ತಿದ್ದಳು.. ಬಡವರಿಂದಲೇ ಸಾವಿರಾರು ಹಣ(Money) ಪೀಕುತ್ತಿದ್ದಳು. ಆದ್ರೆ ಯಾವಾಗ ಲಕ್ಷ ಹಣ ಕೈ ಸೇರಲಿಲ್ಲವೋ ಮೋಸ ಹೋದವರೆಲ್ಲಾ ಒಂದಾದ್ರು.. ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ರು.. ಒಮ್ಮೆ ಜೈಲಿಗೂ ಹೋದಳು ಆದ್ರೆ ಜೈಲಿಗೆ ಹೋಗಿ ಬಂದ ನಂತರ ಆಕೆ ಎಸ್ಕೇಪ್. ಈ ಕಿಲಾಡಿ ಲೇಡಿ ಸಿಕ್ಕಿಹಾಕಿಕೊಳ್ಳೋವರೆಗೂ ಈ ಕೇಸ್‌ನ ಆಳ ಅಗಲ ಸಂಪೂರ್ಣವಾಗಿ ಅರ್ಥವಾಗೋದಿಲ್ಲ. ಸದ್ಯ ಆನೇಕಲ್ ಮತ್ತು ಅತ್ತಿಬೆಲೆ ಭಾಗದಲ್ಲೇ ಇಷ್ಟು ಹಣ ವಂಚಿಸಿದ್ದಾಳೆ, ಅಂದ್ರೆ ಈಕೆ ಬೇರೆ ಬೇರೆ ಕಡೆ ಎಷ್ಟು ನಾಮ ಹಾಕಿರಬಹುದು.
ಇದನ್ನೂ ವೀಕ್ಷಿಸಿ: ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ: ಅನ್ನದಾತನ ತಡೆಯಲು ಬ್ಯಾರಿಕೇಡ್, ತಂತಿಬೇಲಿ ನಿರ್ಮಾಣ