Asianet Suvarna News Asianet Suvarna News
breaking news image

Okkaliga Fight: ಹೊತ್ತಿ ಉರಿಯುತ್ತಿದೆ ಒಕ್ಕಲಿಗ ಕಿಚ್ಚು : ಡಿಕೆಶಿ ‘ಮೈತ್ರಿ ಪತನ’ ಏಟಿಗೆ ಎಚ್‌ಡಿಕೆ ‘ಕೊತ್ವಾಲ್’ ತಿರುಗೇಟು !

‘ಕುಮಾರಸ್ವಾಮಿ ಸರ್ಕಾರದಲ್ಲೇ ಶ್ರೀಗಳ ಫೋನ್ ಟ್ಯಾಪ್’
‘ಇವರಿಂದ ಗೌರವ ಕೊಡುವುದನ್ನು ಕಲಿಯಬೇಕಾ..?’
ಎಚ್‌ಡಿಕೆ  ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
 

ಲೋಕಸಭೆ ಮಹಾ ಸಮರದಲ್ಲಿ ಒಕ್ಕಲಿಗ ಕಾಳಗ(Okkaliga Fight) ಜೋರಾಗಿದೆ. ಕನಕಪುರ ‘ಬಂಡೆ’ V/S ‘ದಳಪತಿ’ ಏಟಿಗೆ ಎದುರೇಟು ನೀಡುತ್ತಿದ್ದಾರೆ. ಹಳೆ ಮೈಸೂರು ವಿಚಾರದಲ್ಲಿ ನೇರಾನೇರ ಗುದ್ದಾಟ ಶುರುವಾಗಿದೆ. ಎಚ್‌ಡಿಕೆ(HD Kumaraswamy) ಆದಿಚುಂಚನಗಿರಿ ಶ್ರೀ(Adichunchanagiri Sri)ಭೇಟಿ ಮಾಡಿದ ಬಳಿಕ ಈ ಬೆಂಕಿ ಹೊತ್ತಿಕೊಂಡಿದೆ. ಒಕ್ಕಲಿಗ ಸಿಎಂ ಇಳಿಸಿದವರ ಜೊತೆಯೇ ಮಠಕ್ಕೆ ಹೋಗಿದ್ದಾರೆ ಎಂದು ಡಿಕೆಶಿ(DK Shivakumar) ಹೇಳಿದರು. ಇದೀಗ ಎಚ್‌ಡಿಕೆ-ಡಿಕೆಶಿ ನಡುವಿನ ಮಾತಿನ ಮಲ್ಲಯುದ್ಧ ತಾರಕಕ್ಕೆ ಏರಿದೆ. ಡಿಕೆಶಿ ‘ಮೈತ್ರಿ ಪತನ’ ಏಟಿಗೆ ಎಚ್‌ಡಿಕೆ ‘ಕೊತ್ವಾಲ್’ ತಿರುಗೇಟು ನೀಡಿದ್ದು, ಡಿಕೆಶಿ ಅಧಿಕಾರ, ದುಡ್ಡಿನ ಮದದಲ್ಲಿ ಮಾತಾಡ್ತಾರೆ. ನೀವು ಕೊತ್ವಾಲ್ ಫಾಲೋವರ್ ಅಲ್ವಾ ಎಂದು ಎಚ್‌ಡಿಕೆ ಹೇಳಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮಧ್ಯೆ  ಫೋನ್ ಟ್ಯಾಪ್ ವಾರ್ ಸಹ ಶುರುವಾಗಿದೆ. ಎಚ್‌ಡಿಕೆ ವಿರುದ್ಧ ಫೋನ್ ಟ್ಯಾಪಿಂಗ್ ಬಾಂಬ್‌ನನ್ನು ಸಚಿವ ಚಲುವರಾಯಸ್ವಾಮಿ ಸಿಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  Rameshwaram Cafe Blast: ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟ ಉಗ್ರನ ಬಂಧನ: ಉ. ಭಾರತದಲ್ಲಿ ಅರೆಸ್ಟ್‌ ಮಾಡಿದ NIA ಅಧಿಕಾರಿಗಳು

Video Top Stories