ಕರಾವಳಿಯಲ್ಲಿ ಮತ್ತೊಮ್ಮೆ ಕೇಸರಿ ಪಡೆಗೆ ಮುಖಭಂಗ: ಬಿಜೆಪಿ ಬೆಂಬಲಿತ ಸದಸ್ಯನಿಂದಲೇ ಎಸ್‌ಡಿಪಿಐಗೆ ಸಾಥ್ !
ಎಸ್‌ಡಿಪಿಐ ಜೊತೆ ಕೇಸರಿ ಪಡೆ ಬಿಜೆಪಿ ಪ್ರತೀ ಬಾರಿ ಮುಗಿ ಬೀಳ್ತಾನೆ ಇದೆ. ಕಾರ್ಯಕರ್ತರ ಹತ್ಯೆ ವಿಚಾರದಲ್ಲೂ ಎಸ್‌ಡಿಪಿಐ ಮೇಲೆ ನಿರಂತರ ಆರೋಪಗಳಿವೆ. ಆದರೆ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತದ ವಿಚಾರದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಎಸ್‌ಡಿಪಿಐಗೆ ಸಾಥ್ ನೀಡಿದ್ದಾರೆ. ಈ ಮೂಲಕ ಮಂಗಳೂರಿನ ತಲಪಾಡಿ ಗ್ರಾ.ಪಂ ಎಸ್ಡಿಪಿಐ ತೆಕ್ಕೆಗೆ ಜಾರಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ(BJP) ಭಾರೀ ಮುಖಭಂವಾಗಿವೆ. ಧರ್ಮ ದಂಗಲ್ ಮತ್ತು ಹಿಂದೂ ಸಂಘಟನೆ ವರ್ಸಸ್ ಬಿಜೆಪಿ ಫೈಟ್ ಮಧ್ಯೆ ಕಾಂಗ್ರೆಸ್(Congress) ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿತ್ತು. ಈಗ ಗ್ರಾಮ ಪಂಚಾಯತ್(Gram Panchayat) ಚುನಾವಣೆಯಲ್ಲೂ ಬಿಜೆಪಿಗೆ ಮುಖಭಂಗವಾಗಿದೆ. ಬಿಜೆಪಿ ಹೆಚ್ಚು ಸದಸ್ಯ ಬಲ ಹೊಂದಿದ್ದ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಎಸ್ಡಿಪಿಐ(SDPI) ಪಾಲಾಗಿದೆ.ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಮತ್ತೆ ಅಧ್ಯಕ್ಷಗಾದಿ ಚುನಾವಣೆ ನಡೀತಾ ಇದೆ. ಅದರಂತೆ ದ.ಕ ಜಿಲ್ಲೆಯಲ್ಲೂ ಹಲವು ಪಂಚಾಯತ್‌ಗಳ ಆಡಳಿತಕ್ಕಾಗಿ ಸೆಣಸಾಟ ನಡೀತಾ ಇದ್ದು, ತಲಪಾಡಿ ಗ್ರಾ.ಪಂ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ಅದರಲ್ಲೀ ಎಸ್ಡಿಪಿಐಗೆ ಬಿಜೆಪಿ ಬೆಂಬಲಿತ ಸದಸ್ಯರೇ ಸಾಥ್ ಕೊಡುವ ಮೂಲಕ ತಲಪಾಡಿ ಗ್ರಾ.ಪಂ ಆಡಳಿತ ಎಸ್ಡಿಪಿಐ ತೆಕ್ಕೆಗೆ ಜಾರಿದೆ. ದಕ್ಷಿಣ ಕನ್ನಡ(Dakshina kannada) ಜಿಲ್ಲೆ ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಮುಂದಿನ ಎರಡೂವರೆ ವರ್ಷಗಳ ಅವಧಿಗೆ ಅಧ್ಯಕ್ಷ ಚುನಾವಣೆ ನಡೆಯಿತು.
ಇದನ್ನೂ ವೀಕ್ಷಿಸಿ: 20 ಸಾವಿರ ಕೊಟ್ರೆ ದಾಖಲೆಯಿಲ್ಲದೆ ಭಾರತಕ್ಕೆ ಎಂಟ್ರಿ: ಶಂಕಿತನೊಬ್ಬನ ವಿಚಾರಣೆಯಲ್ಲಿ ಎನ್ಐಎಗೆ ಸ್ಪೋಟಕ ಮಾಹಿತಿ !