ಕೈ ಕೋಟೆಯಲ್ಲಿ ಸಿಎಂ ಯುದ್ಧ ಮೊಳಗಿಸಿದ ಸಿದ್ದರಾಮಯ್ಯ ಶಿಷ್ಯರು

ಇತ್ತ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಸ್ವಲ್ಪ ತಣ್ಣಗಾಗುತ್ತಿದ್ದಂತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಕೂಗು ಜೋರಾಗುತ್ತಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.23): ಇತ್ತ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕೂಗು ಸ್ವಲ್ಪ ತಣ್ಣಗಾಗುತ್ತಿದ್ದಂತೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಕೂಗು ಜೋರಾಗುತ್ತಿದೆ. 

'ಕೈ' ಪಾಳಯದಲ್ಲಿ ಮುಖ್ಯಮಂತ್ರಿ ವಾರ್, ಶಿಸ್ತು ಮೀರಿ ಹೇಳಿಕೆ ನೀಡುತ್ತಿರುವವರಿಗೆ ನೊಟೀಸ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಆಗಬೇಕೆಂದು ಕೆಲವು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿರುವುದು ಡಿಕೆ ಶಿವಕುಮಾರ್ ಬಣದ ಕಣ್ಣುಕೆಂಪಾಗಿಸಿದೆ. ಈ ಹಿನ್ನೆಲೆಯಲ್ಲಿ ಸಿದ್ದು ಕಾಂಗ್ರೆಸ್ ವರ್ಸಸ್ ಡಿಕೆ ಕಾಂಗ್ರೆಸ್ ಎನ್ನುವ ಅಂತರ್ ಯುದ್ಧ ಶುರುವಾಗಿದೆ.

Related Video