ಸಚಿವರಿಗೆ ಸುರ್ಜೇವಾಲಾ ಟಾಸ್ಕ್: ಪಕ್ಷದ ಅಭ್ಯರ್ಥಿಗೆ ಸೋಲಾದ್ರೆ ಸಚಿವ ಸ್ಥಾನಕ್ಕೆ ಕುತ್ತು ಬರುತ್ತಾ?
ಕಾಂಗ್ರೆಸ್ ಹೈವೋಲ್ಟೇಜ್ ಸಭೆಯಲ್ಲಿ ಸಚಿವರಿಗೆ ಬಿಗ್ ಟಾಸ್ಕ್
ರಾಜ್ಯದ ಸಚಿವರಿಗೆ ಬೆಚ್ಚಿ ಬೀಳಿಸುವ ಸುದ್ದಿ ನೀಡಿದ ಹೈಕಮಾಂಡ್
ಲೋಕಸಭೆಯಲ್ಲಿ ನಿಮ್ಮ ಉಸ್ತುವಾರಿ ಕ್ಷೇತ್ರದಲ್ಲಿ ಗೆಲ್ಲಲೇಬೇಕು
ನಿಮ್ಮ ಕ್ಷೇತ್ರದಲ್ಲಿ ಗೆಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ಕುತ್ತು ಬರಲಿದೆ
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈವೋಲ್ಟೇಜ್ ಸಭೆಯಲ್ಲಿ ಸಚಿವರಿಗೆ ಹೈಕಮಾಂಡ್ (High Command) ಶಾಕ್ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ(Loksabha election) ನಿಮ್ಮ ಉಸ್ತುವಾರಿ ಕ್ಷೇತ್ರದಲ್ಲಿ ಗೆಲ್ಲಲೇಬೇಕು. ನಿಮ್ಮ ಕ್ಷೇತ್ರದಲ್ಲಿ ಗೆಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ಬೇರೆಯವರು ಬರುತ್ತಾರೆ ಎಂದು ರಾಜ್ಯ ಉಸ್ತುವಾರಿ ಸುರ್ಜೇವಾಲಾ(Surjewala) ಹೇಳಿದ್ದಾರೆ. ನಿಮ್ಮ ಕ್ಷೇತ್ರ ಗೆಲ್ಲದಿದ್ದರೇ, ಸಚಿವ ಸ್ಥಾನಕ್ಕೆ ಕುತ್ತು ಬರಲಿದೆ. ಎಲ್ಲಾ ಸಚಿವರಿಗೆ ಟಾಸ್ಕ್ ಕೊಟ್ಟು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕಳುಹಿಸಿದ್ದಾರೆ. ಸಭೆಯ ಕೊನೆಯಲ್ಲಿ ಸುರ್ಜೇವಾಲಾ ಕೊಟ್ಟ ಮೆಸೇಜ್‌ಗೆ ಸಚಿವರು ಥಂಡಾ ಹೊಡೆದಿದ್ದಾರೆ. ಲೋಕಸಭೆಗೂ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿವೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲೂ ಪಕ್ಷ ಗೆಲ್ಲಬೇಕು. ಲೋಕಸಭೆಗೂ ಮುನ್ನ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷ ಗೆಲ್ಲಿಸುವ ಅನಿವಾರ್ಯತೆ ಇದೀಗ ಕಾಂಗ್ರೆಸ್‌ಗೆ ಇದೆ.
ಇದನ್ನೂ ವೀಕ್ಷಿಸಿ: ಡಿಕೆಶಿ ಸಿಂಗಾಪುರ ಆಪರೇಶನ್ ಬಾಂಬ್: ಸರ್ಕಾರ ಬಹಳ ದಿನ ಇರಲ್ಲ ಎಂದು ಅವರ ತಲೆಯಲ್ಲಿರಬಹುದು ಹೆಚ್‌ಡಿಕೆ ವ್ಯಂಗ್ಯ