ಡಿಕೆಶಿ ಸಿಂಗಾಪುರ ಆಪರೇಶನ್ ಬಾಂಬ್‌: ಸರ್ಕಾರ ಬಹಳ ದಿನ ಇರಲ್ಲ ಎಂದು ಅವರ ತಲೆಯಲ್ಲಿರಬಹುದು ಹೆಚ್‌ಡಿಕೆ ವ್ಯಂಗ್ಯ

ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಕುಳಿತು ಷಡ್ಯಂತ್ರ
ಡಿಕೆಶಿ ಹೇಳಿಕೆಗೆ ಎಚ್.ಡಿ ಕುಮಾರಸ್ವಾಮಿ ಕೌಂಟರ್
ಪೊಲೀಸ್ ಇಂಟಲಿಜೆನ್ಸ್ ಎಷ್ಟರಮಟ್ಟಿಗೆ ಕೆಲಸ ಮಾಡ್ತಿದೆ?

Share this Video
  • FB
  • Linkdin
  • Whatsapp

ಬೆಂಗಳೂರು: ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ(former CM H.D. Kumaraswamy) ಮರಳಿದ್ದಾರೆ. ಹೆಚ್‌ಡಿಕೆ ಕುಟುಂಬ ಸಮೇತ ಯುರೋಪ್‌ಗೆ ಪ್ರವಾಸಕ್ಕೆ(Europe tour) ಹೋಗಿದ್ದರು. ಏರ್ ಪೋರ್ಟ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಚ್. ಡಿ .ಕುಮಾರಸ್ವಾಮಿ, ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ(Singapore) ಕುಳಿತು ಷಡ್ಯಂತ್ರ ಎಂಬ ಡಿಕೆಶಿ ಆರೋಪಕ್ಕೆ ಕೌಂಟರ್ ನೀಡಿದ್ದಾರೆ. ಪೊಲೀಸ್ ಇಂಟಲಿಜೆನ್ಸ್ ಎಷ್ಟರಮಟ್ಟಿಗೆ ಕೆಲಸ ಮಾಡ್ತಿದೆ?, ಕುಟುಂಬ ಸಮೇತ ಯುರೋಪ್‌ಗೆ ಹೋಗಿದ್ವಿ. ಆದ್ರೆ ಸರ್ಕಾರ ಕೆಡವಲು ಹೋಗಿದ್ದಾರೆ ಎಂದು ಹೇಳಿದ್ರು. ಜೆಡಿಎಸ್ 19 ಸ್ಥಾನ ಗೆದ್ರೂ ನಮ್ಮ ಭಯ ಎಷ್ಟಿದೆ ನೋಡಿ ಎಂದು ಕಿಡಿಕಾರಿದರು. ಕಾಂಗ್ರೆಸ್‌ನವರು (Congress) ಏಕೆ ಹೀಗೆ ಹೇಳ್ತಿದ್ದಾರೆ ಗೊತ್ತಿಲ್ಲ. ಈ ಸರ್ಕಾರ ಬಹಳ ದಿನ ಇರಲ್ಲ ಅಂದ್ಕೊಂಡಿರಬೇಕು. ನಮಗಿಂತ ಜಾಸ್ತಿ ಡಿಕೆಶಿ ಜೋತಿಷ್ಯ ನಂಬ್ತಾರೆ. ಹಲವಾರು ರೀತಿಯ ಕುತಂತ್ರಗಳನ್ನ ಮಾಡ್ತಾರೆ. ಕೃತಕ ಶಕ್ತಿಯನ್ನ ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಹಾಗಾಗಿ ಈ ರೀತಿ ಹೇಳಿರಬೇಕು ಎಂದು ಹೆಚ್‌ಡಿಕೆ ಗುಡುಗಿದ್ದಾರೆ.

ಇದನ್ನೂ ವೀಕ್ಷಿಸಿ:  ಕಲುಷಿತ ನೀರು ಸೇವಿಸಿ ದುರಂತ ಪ್ರಕರಣ: ವಿಷಕಾರಿ ಅಂಶ ಕಂಡು ಬಂದಿಲ್ಲ FSL ವರದಿ

Related Video