Asianet Suvarna News Asianet Suvarna News

Sumalatha: ಮಂಡ್ಯ ಟಿಕೆಟ್ ಚಕ್ರವ್ಯೂಹ ಭೇದಿಸ್ತಾರಾ ರೆಬೆಲ್ ಲೇಡಿ..? ಸುಮಲತಾ ಪಗಡೆಯಾಟ..ಉರುಳಿತು ದಾಳ..!

ಬಿಜೆಪಿ ಹೈಕಮಾಂಡ್‌ನಿಂದ ಸುಮಲತಾಗೆ ಸಿಕ್ಕಿದ್ಯಾ ಟಿಕೆಟ್ ಭರವಸೆ..?
ಮಂಡ್ಯ ಟಿಕೆಟ್ 100ಕ್ಕೆ 1000 ಪಾಲು ಜೆಡಿಎಸ್‌ಗೆ ಅಂದ ದಳಪತಿಗಳು..!
ಬೆಂಗಳೂರಲ್ಲಿ ಬೆಂಬಲಿಗರ ಸಭೆ ನಡೆಸಿದ ಮಂಡ್ಯದ ರೆಬೆಲ್ ಸಂಸದೆ..!

ಇದು ಮಂಡ್ಯ ಚಕ್ರವ್ಯೂಹ. ಮಂಡ್ಯ(Mandya) ಟಿಕೆಟ್'ಗಾಗಿ(Ticket) ಮಂಡ್ಯದ ಗೌಡ್ತಿ ಹೆಣೆದಿರೋ ಚಕ್ರವ್ಯೂಹ. ಐದು ವರ್ಷಗಳ ಹಿಂದೆ ಮಂಡ್ಯದ ಲೇಡಿ ರೆಬೆಲ್ ಸ್ಟಾರ್ ಗೆದ್ದದ್ದು ಒಂದು ಮಹಾಯುದ್ಧ, ಈ ಬಾರಿ ಮಂಡ್ಯದಲ್ಲಿ ನಡೆಯಲಿರೋದು ಅಂಥದ್ದೇ ಮತ್ತೊಂದು ಯುದ್ಧ. ದಳಪತಿಗಳ ಪ್ರಬಲ ಪಟ್ಟಿನ ಮಧ್ಯೆಯೂ ಮಂಡ್ಯ ಲೋಕಸಭಾ(Loksabha) ಕ್ಷೇತ್ರದ ಟಿಕೆಟ್ ಗಿಟ್ಟಿಸಿ, ಮೈತ್ರಿ ಪಾಳೆಯದಿಂದ ಅಖಾಡಕ್ಕಿಳಿಯಲು ಸಿದ್ಧತೆ ನಡೆಸ್ತಾ ಇರೋ ಸಂಸದೆ ಸುಮಲತಾ ಅಂಬರೀಶ್(Sumalatha), ಅದಕ್ಕಾಗಿ ಮತ್ತೊಮ್ಮೆ ಮತ್ತದೇ ದಾಳವನ್ನು ಉರುಳಿಸಿದ್ದಾರೆ. ಅದೇ ಮಂಡ್ಯ ದಾಳ. ರೆಬೆಲ್ ಸ್ಟಾರ್ ಅಂಬರೀಶ್ ಅಂದ್ರೆ ಮಂಡ್ಯದ ಗಂಡು ಅಂತಾನೇ ಫೇಮಸ್ ಆಗಿದ್ದವರು. ಮಂಡ್ಯವನ್ನು ಇಡೀ ಇಂಡಿಯಾವೇ ತಿರುಗಿ ನೋಡುವಂತೆ ಮಾಡಿದ್ದ ಕೆಂಗಣ್ಣ ಕರ್ಣ ಅಂಬರೀಶ್ ಹೆಸರು ಮತ್ತೆ ಮಂಡ್ಯ ಅಖಾಡದಲ್ಲಿ ಸದ್ದು ಮಾಡ್ತಾ ಇದೆ. 2019ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವ್ರ ಹಿಂದಿದ್ದ ಶಕ್ತಿಯೇ ರೆಬೆಲ್ ಸ್ಟಾರ್ ಅಂಬರೀಶ್. ಸುಮಲತಾ ಚುನಾವಣೆ ಗೆದ್ದದ್ದೇ ಅಂಬರೀಶ್ ಹೆಸರಲ್ಲಿ, ಅವ್ರ ಸಾವಿನ ಅನುಕಂಪದಲ್ಲಿ. ಈಗ ಮತ್ತೆ ಟಿಕೆಟ್ ಗಿಟ್ಟಿಸಲು ಮಂಡ್ಯದ ಗಂಡಿನ ಅಸ್ಮಿತೆಯನ್ನೇ ಹಿಡಿದು ಹೊರಟಿದ್ದಾರೆ ಸುಮಲತಾ.

ಇದನ್ನೂ ವೀಕ್ಷಿಸಿ:  Bengaluru Crime: ಕೊಲೆಗಾರನ ಸುಳಿವು ಕೊಟ್ಟಿದ್ದು ಶ್ವಾನ..! ಹೆಣ ಹಾಕಿ ಹೆಂಡತಿ ಪಕ್ಕ ಮಲಗಿದ್ದ..!

Video Top Stories