Mandya Politics: ದಳ ಸೇಡಿನ ದಾಳ..ರೆಬೆಲ್ ಲೇಡಿ ಪ್ರತಿ ಪಟ್ಟು..ಮಂಡ್ಯ ಯಾರಿಗೆ..?

"ಮಂಡ್ಯದಿಂದಲೇ ನಮ್ಮ ಲೆಕ್ಕ ಶುರು"ಅಂದ ಮಂಡ್ಯದ ಜೆಡಿಎಸ್ ಲೀಡರ್..!
"ನಾನು ರಾಜಕೀಯಕ್ಕೆ ಬಂದಿರೋದೇ ಮಂಡ್ಯಕ್ಕಾಗಿ.." ಸುಮಲತಾ ಪಟ್ಟು..!
"ಮಂಡ್ಯದಲ್ಲಿ ನಾನೇ ಮೈತ್ರಿ ಅಭ್ಯರ್ಥಿ"ಸುಮಲತಾ ಮಾತಿನ ಮರ್ಮ ಏನು..?

Share this Video
  • FB
  • Linkdin
  • Whatsapp

ಇದು ಮಂಡ್ಯದಲ್ಲಿ ಶುರುವಾಗಿರೋ ಕೋಟೆ ಕಾಳಗ.. ಮಂಡ್ಯ(Mandya) ಬೇಟೆಗಾಗಿ ರೆಬೆಲ್ ಲೇಡಿ ಸುಮಲತಾ(Sumalatha) ಮತ್ತು ದಳಪತಿಗಳ ಮಧ್ಯೆ ಶುರುವಾಗಿರೋ ಯುದ್ಧ. ಲೋಕಸಭಾ ಚುನಾವಣೆ(Loksabha) ಹತ್ತಿರ ಬರ್ತಾ ಇದ್ದಂತೆ ಮಂಡ್ಯ ಕೋಟೆಗಾಗಿ ದೊಡ್ಡ ಜಿದ್ದಾಜಿದ್ದಿಯೇ ಶುರುವಾಗಿದೆ. 2019ರಲ್ಲಿ ಮಂಡ್ಯದಲ್ಲಿ ನಡೆದದ್ದು ಇಡೀ ಇಂಡಿಯಾವೇ ತಿರುಗಿ ನೋಡಿದಂಥಾ ಯುದ್ಧ. ಈ ಬಾರಿ ಮಂಡ್ಯ ರಣರಂಗದಲ್ಲಿ ನಡೀತಾ ಇರೋದು ಅಂಥದ್ದೇ ಮತ್ತೊಂದು ರಣ ರಣ ಕಾಳಗ. ಮಂಡ್ಯದಲ್ಲಿ ಅದ್ಯಾವುದೇ ಎಲೆಕ್ಷನ್ ಬರ್ಲಿ. ಇಡೀ ಇಂಡಿಯಾವೇ ಒಮ್ಮೆ ತಿರುಗಿ ನೋಡುವಂತಿರತ್ತೆ ಮಂಡ್ಯ ರಣರಂಗ. ಪಂಚಾಯತ್ ಚುನಾವಣೆಯೇ ಇರ್ಲಿ, ಪಾರ್ಲಿಮೆಂಟ್ ಎಲೆಕ್ಷನೇ ಆಗಿರ್ಲಿ. ಅದೇ ಜಿದ್ದು, ಅದೇ ತೀವ್ರತೆ, ಅದೇ ಪೈಪೋಟಿ. ಅಂಥಾ ಮಂಡ್ಯ ಮತ್ತೊಂದು ರಣರೋಚಕ ಚುನಾವಣೆಗೆ ಸಾಕ್ಷಿಯಾಗೋ ದಿನ ಹತ್ತಿರ ಬರ್ತಾ ಇದೆ. ಪ್ರಿಯ ವೀಕ್ಷಕರೇ.. ಲೋಕಸಭಾ ಚುನಾವಣೆಗೆ ಜೆಡಿಎಸ್(Jds) ಮತ್ತು ಬಿಜೆಪಿ(BJP) ಮಧ್ಯೆ ದೋಸ್ತಿ ಕುದುರಿಸಲ್ಪಟ್ಟಿರೋದು ನಿಮ್ಗೆ ಗೊತ್ತೇ ಇದೆ. ಈ ದೋಸ್ತಿಯಿಂದ ಯಾರಿಗೆಷ್ಟು ಲಾಭವೋ ಗೊತ್ತಿಲ್ಲ. ಆದ್ರೆ ಟೆನ್ಷನ್ ಶುರುವಾಗಿರೋದು ಮಾತ್ರ ಮಂಡ್ಯದ ರೆಬೆಲ್ ಲೇಡಿಗೆ.

ಇದನ್ನೂ ವೀಕ್ಷಿಸಿ: Gyanvapi Mosque: ಮಸೀದಿಯೊಳಗೆ ಇದೆ ತ್ರಿಶೂಲ..! ಗೋಡೆಗಳು ಹೇಳುತ್ತಿವೆ ಮುಚ್ಚಿಟ್ಟ ಸತ್ಯ..!

Related Video