Asianet Suvarna News Asianet Suvarna News

ಎಚ್‌ಡಿಕೆ ಆಡಿಯೋ, ವಿಡಿಯೋ ಬೆದರಿಕೆ: ಇವತ್ತೆ ರಿಲೀಸ್ ಮಾಡುವಂತೆ ಸುಮಲತಾ ಸವಾಲು

Jul 5, 2021, 5:33 PM IST

ಬೆಂಗಳೂರು, (ಜುಲೈ.05): ಕೆಆರ್‌ಎಸ್ ಡ್ಯಾಂ ಹಾಗೂ ಮೈಶುಗರ್‌ ಕಾರ್ಖಾನೆ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ, ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದು, ನನ್ನ ಬಳಿ ಕೆಲ ಸ್ಫೋಟಕ ಆಡಿಯೋಗಳಿವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

'ಸುಮಲತಾ ಅಂಬರೀಶ್ ವಿರುದ್ಧ ಆಡಿಯೋ ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ, ಕದ್ದು ಮುಚ್ಚಿ ಆಡಿಯೋ, ವಿಡಿಯೋ ಮಾಡೋದೇ ಇವರ ಕೆಲಸ. ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ರೆ ಬಾಯಿ ಮುಚ್ಚಿಸುವ ಯತ್ನ ಎಂದು ಕಿಡಿಕಾರಿದ್ದು, ಇವತ್ತೆ ಆಡಿಯೋ, ವಿಡಿಯೋಗಳು ರಿಲೀಸ್ ಮಾಡುವಂತೆ ಸವಾಲು ಹಾಕಿದ್ದಾರೆ.