Sumalata: ಮೈತ್ರಿಗೆ ಸೆಡ್ಡು ಹೊಡೆಯುತ್ತಾರಾ ಸಂಸದೆ ಸುಮಲತಾ ? ಟಿಕೆಟ್‌ ಸಿಗದಿದ್ದರೂ ಮಂಡ್ಯದಿಂದ ಕಣಕ್ಕೆ ?

ಒಂದು ವೇಳೆ ಬಿಜೆಪಿ-ಜೆಡಿಎಸ್‌ ಮೈತ್ರಿ ಟಿಕೆಟ್‌ ಮಿಸ್‌ ಆದ್ರೆ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಮಂಡ್ಯದಿಂದ ನಿಲ್ಲಲಿದ್ದಾರೆ ಎನ್ನಲಾಗ್ತಿದೆ.

First Published Dec 26, 2023, 12:14 PM IST | Last Updated Dec 26, 2023, 12:14 PM IST

ಮೈತ್ರಿಗೆ ಸಂಸದೆ ಸುಮಲತಾ ಸೆಡ್ಡು ಹೊಡೆಯುವಂತೆ ಕಾಣುತ್ತಿದೆ. ಮತ್ತೆ ಮಂಡ್ಯ(Mandya) ಅಖಾಡದಿಂದ ಸುಮಲತಾ ಸ್ಪರ್ಧೆ ಮಾಡುವ ಸಾಧ್ಯತೆ ಇದೆ. ಟಿಕೆಟ್‌ ಸಿಗದಿದ್ದರೂ ಸ್ಪರ್ಧೆ ಮಾಡಬಹುದು ಎನ್ನಲಾಗ್ತಿದೆ. ಒಂದು ವೇಳೆ ಬಿಜೆಪಿ(BJP) ಜೆಡಿಎಸ್‌(JDS) ಮೈತ್ರಿ ಟಿಕೆಟ್‌ ಮಿಸ್‌ ಆದ್ರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಲಿದ್ದಾರೆ ಎನ್ನಲಾಗ್ತಿದೆ. ನಿಮ್ಮ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿ ಕೊಡಿ ಎಂದು ಪರೋಕ್ಷವಾಗಿ ಸಂಸದೆ ಸುಮಲತಾ(Sumalata) ಪರ ನಟ ದರ್ಶನ್‌(Actor Darshan) ಮತಯಾಚಿಸಿದ್ದಾರೆ. ಕಾಟೇರ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ದರ್ಶನ್‌ ಸುಳಿವು ಕೊಟ್ಟಿದ್ದಾರೆ. ಸುಮಲತಾರ ಮೇಲೆ ನಿಮ್ಮ ಪ್ರೀತಿ, ಬೆಂಬಲ ಹೀಗೆ ಇರಲಿ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  Congress: ಕಾಂಗ್ರೆಸ್‌ಗೆ ಗ್ರಹಣ ಬಡಿಸಿತಾ ಪಂಚರಾಜ್ಯ ಫಲಿತಾಂಶ..? ಆಪರೇಷನ್ ಹಸ್ತಕ್ಕೆ ಪಂಚರಾಜ್ಯ ಫಲಿತಾಂಶ ಶಾಕ್..?

Video Top Stories