BBMP Elections: ಬಿಜೆಪಿ ಗೆಲುವಿನ ತಂತ್ರಕ್ಕೆ ತಿರುಮಂತ್ರ ಹಾಕಿದ ಕಾಂಗ್ರೆಸ್!
ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಇಳಿಸಿದೆ. ಇದು ಬಿಜೆಪಿ ಅವಧಿಯಲ್ಲಿ 243ಕ್ಕೆ ಏರಿಕೆಯಾಗಿತ್ತು.
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಸಜ್ಜಾಗಿದ್ದು, ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಇಳಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿಂದೆ ಹೈಕೋರ್ಟ್(Highcourt) ನಿರ್ದೇಶನದ ಮೇರೆಗೆ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಡಿಲಿಮಿಟೇಷನ್ ಸಮಿತಿ ರಚಿಸಿತ್ತು. ಜನಸಂಖ್ಯೆ ಆಧಾರದ ಮೇಲೆ 243 ವಾರ್ಡ್(Wards) ನಿಗಿಪಡಿಸುವುದು ಸೂಕ್ತ ಎಂದು ಸಮಿತಿ ವರದಿ ನೀಡಿತ್ತು. ಸಮಿತಿ ವರದಿ ಬಳಿಕ ಸರ್ಕಾರ 243 ವಾರ್ಡ್‌ಗಳನ್ನು 225ಕ್ಕೆ ಇಳಿಸಿ ಆದೇಶ ಹೊರಡಿಸಿದೆ. 2020ರಲ್ಲಿ ಬಿಬಿಎಂಪಿ(BBMP) ಸದಸ್ಯರ ಅಧಿಕಾರಾವಧಿ ಮುಗಿದಿದ್ದು, ಚುನಾವಣೆ ನಡೆಸುವ ದೃಷ್ಟಿಯಿಂದ 198 ವಾರ್ಡ್‌ಗಳಾಗಿ ಪುನರ್ ವಿಂಗಡಣೆ ಮಾಡಲಾಗಿತ್ತು. ಹಿಂದೆ ಬಿಜೆಪಿ(BJP) ಸರ್ಕಾರ 243 ವಾರ್ಡ್‌ಗಳಿಗೆ ಏರಿಕೆ ಮಾಡಿತ್ತು. ಬಿಜೆಪಿ ಮಾಡಿರೋ ವಾರ್ಡ್ ವಿಂಗಡಣೆ ಸೂಕ್ತವಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕೋರ್ಟ್ ಮೊರೆ ಹೋಗಿತ್ತು. ಇದೀಗ ಕಾಂಗ್ರೆಸ್(Congress) ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿದೆ. 15 ವಾರ್ಡ್‌ಗಳನ್ನು ಕಡಿಮೆ ಮಾಡಲು ಕಾಂಗ್ರೆಸ್ ತೀರ್ಮಾನಿಸಿದೆ.
ಇದನ್ನೂ ವೀಕ್ಷಿಸಿ: ಅಯೋಗ್ಯ ಸಕ್ಸಸ್ ಜೋಡಿಯ ಮ್ಯಾಟ್ನಿ: ಸಂಜೆ ಮೇಲೆ ಸುಮ್ನೇ ಹಂಗೆ ಫೋನ್ ಮಾಡ್ಲಾ ಅಂತಿದ್ದಾರೆ ಸತೀಶ್