ಜಾತಿ ಗಣತಿ ಪರ ಅಮಿತ್ ಶಾ ಬ್ಯಾಟಿಂಗ್: ಈ ಬಗ್ಗೆ ಕೇಂದ್ರ ಗೃಹ ಸಚಿವರು ಹೇಳಿದ್ದೇನು ?

ಸಮಗ್ರ ಚರ್ಚೆ, ಪರಾಮರ್ಶೆ ನಡೆಯಬೇಕು ಎಂದ ಶಾ
ಬಿಜೆಪಿ ಎಂದಿಗೂ ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿಲ್ಲ 
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ

First Published Nov 9, 2023, 11:56 AM IST | Last Updated Nov 9, 2023, 11:56 AM IST

ದೇಶದೆಲ್ಲೆಡೆ ಜಾತಿ ಗಣತಿ ಕೂಗು ಹೆಚ್ಚುತ್ತಿದೆ. ಕರ್ನಾಟಕದ(Karnataka) ಬಳಿಕ ಹಲವು ರಾಜ್ಯಗಳಲ್ಲಿ ಇದರ ಬಗ್ಗೆ ಒತ್ತಾಯ ಕೇಳಿಬಂದಿದೆ. ಲೋಕಸಭೆ ಚುನಾವಣೆ(loksabha election) ಹೊಸ್ತಿಲಲ್ಲಿ ವಿಪಕ್ಷಗಳು ಹೊಸ ಅಸ್ತ್ರವನ್ನು ಹುಡುಕಿಕೊಂಡಿವೆ. ಅಲ್ಲದೇ ಬಿಜೆಪಿ ವಿರುದ್ಧ ಜಾತಿ ಗಣತಿ ಅಸ್ತ್ರ ಬಳಸಲು ಪ್ರತಿಪಕ್ಷಗಳು ಮುಂದಾಗಿವೆ. ಜಾತಿ ಗಣತಿ(Caste census) ಮಾಡುವಂತೆ ಕೇಂದ್ರಕ್ಕೆ ಒತ್ತಡ ಹಿನ್ನೆಲೆ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ (Narendra Modi) ಕಿಡಿಕಾರಿದ್ದರು. ಇನ್ನೂ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ,  ನಮ್ಮದು ರಾಷ್ಟ್ರೀಯ ಪಕ್ಷ, ನಾವು ಕೇವಲ ಮತಕ್ಕಾಗಿ ರಾಜಕೀಯ ಮಾಡಲ್ಲ. ನಾವು ಎಲ್ಲರ ಜೊತೆ ಮುಕ್ತವಾಗಿ ಚರ್ಚಿಸಿ ಉತ್ತಮ ನಿರ್ಧಾರ ತೆಗೆದುಕೊಳ್ತೀವಿ. ಇದನ್ನೇ ಬಳಸಿಕೊಂಡು ಚುನಾವಣೆ ಎದುರಿಸುವುದಿಲ್ಲ. ಭಾರತೀಯ ಜನತಾ ಪಕ್ಷ ಜಾತಿಗಣತಿಯನ್ನ ವಿರೋಧಿಸುವುದಿಲ್ಲ. ತುಂಬಾ ಯೋಚಿಸಿಯೇ ನಿರ್ಧಾರ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಹಾಲಿ, ಮಾಜಿ ಶಾಸಕರ ನಡುವೆ ಮದ್ಯಸಾರ ಫೈಟ್: ಲಿಕ್ಕರ್ ಪ್ರಕರಣದ ಹಿಂದಿರುವ ಕೈ ಯಾರದ್ದು..?