Asianet Suvarna News Asianet Suvarna News

ಸಂಪುಟ ಸರ್ಕಸ್: ಡಿಸಿಎಂ ಕುರ್ಚಿಗಾಗಿ ದೇವಿಯ ಮೊರೆ ಹೋದ ಕೇಸರಿ ಕಲಿ.!

ಸಿಎಂ ಬಿಎಸ್‌ ಯಡಿಯೂರಪ್ಪ ದೆಹಲಿ ಭೇಟಿ ಬೆನ್ನಲ್ಲೇ ಸಚಿವ ಸಂಪುಟ ಸರ್ಕಸ್ ಜೋರಾಗಿ ನಡೆಯುತ್ತಿದೆ. ಮಂತ್ರಿಗಿರಿಗಾಗಿ ಲಾಬಿಯೂ ಹೆಚ್ಚಾಗುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು ಡಿಸಿಎಂ ಸ್ಥಾನಕ್ಕಾಗಿ ಸರ್ಕಸ್ ನಡೆಸುತ್ತಿದ್ದಾರೆ. 

ಬೆಂಗಳೂರು (ಸೆ. 19): ಸಿಎಂ ಬಿಎಸ್‌ ಯಡಿಯೂರಪ್ಪ ದೆಹಲಿ ಭೇಟಿ ಬೆನ್ನಲ್ಲೇ ಸಚಿವ ಸಂಪುಟ ಸರ್ಕಸ್ ಜೋರಾಗಿ ನಡೆಯುತ್ತಿದೆ. ಮಂತ್ರಿಗಿರಿಗಾಗಿ ಲಾಬಿಯೂ ಹೆಚ್ಚಾಗುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು ಡಿಸಿಎಂ ಸ್ಥಾನಕ್ಕಾಗಿ ಸರ್ಕಸ್ ನಡೆಸುತ್ತಿದ್ದಾರೆ. 

'ಸಿದ್ರಾಮಯ್ಯ ಸಿಎಂ ಆಗಿದ್ದಾಗ ಡ್ರಗ್ ತನಿಖೆ ನಡೆಯದಂತೆ ಅಧಿಕಾರಿಗಳನ್ನು ಕಟ್ಟಿ ಹಾಕಿದ್ದರು'

ಡಿ. ಕೆ. ಶಿವಕುಮಾರ್‌ ಅವರ ಭೇಟಿಯಿಂದಾಗಿ ಗಮನ ಸೆಳೆದಿದ್ದ  ವಡಗೇರಾ ತಾಲೂಕಿನ ಗಡೇದ ದುರ್ಗಾದೇವಿ ದೇವಸ್ಥಾನಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ದಿಢೀರ್‌ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. 

ಗಡೇ ದುರ್ಗಾದೇವಿ ದೇವಸ್ಥಾನಕ್ಕೆ ನಡೆದುಕೊಂಡರೆ ಅಂದುಕೊಂಡಿದ್ದು ಆಗುತ್ತದೆ ಎಂಬ ನಂಬಿಕೆ ಇದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವ ಹಿಂದೆ ಇದು ಸತ್ಯವಾಗಿದೆ.  ಹೀಗಾಗಿ ಈಗ ಶ್ರೀರಾಮುಲು ಅವರು ಡಿಸಿಎಂ ಸ್ಥಾನಕ್ಕಾಗಿ ಹರಕೆ ಹೊತ್ತಿದ್ದಾರೆ ಎನ್ನಲಾಗಿದ್ದು, ದೇವಸ್ಥಾನದ ಅರ್ಚಕ ಮರೆಪ್ಪ ವಿಶೇಷ ಪೂಜೆ ನಡೆಸಿದ್ದಾರೆ.ಸಂಪುಟ ಸರ್ಕಸ್ ಬಗ್ಗೆ ಇನ್‌ಸೈಡ್ ಪಾಲಿಟಿಕ್ಸ್ ಇಲ್ಲಿದೆ ನೋಡಿ..!

Video Top Stories