Assembly election: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಶಾಸಕನ ಹತ್ಯೆಗೆ ಸ್ಕೆಚ್

ರಾಜ್ಯ ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಭಯಾನಕ ಸ್ಕೆಚ್ ಹಾಕಲಾಗಿದೆ. ರೌಡಿಗಳ ಗ್ಯಾಂಗ್‌ವೊಂದು ಸತೀಶ್ ರೆಡ್ಡಿ ಹತ್ಯೆಗೆ ಬರೋಬ್ಬರಿ 2 ಕೋಟಿ ರೂ. ಸುಪಾರಿ ಪಡೆದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಫೆ.15): ರಾಜ್ಯ ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಭಯಾನಕ ಸ್ಕೆಚ್ ಹಾಕಲಾಗಿದೆ. ರೌಡಿಗಳ ಗ್ಯಾಂಗ್‌ವೊಂದು ಸತೀಶ್ ರೆಡ್ಡಿ ಹತ್ಯೆಗೆ ಬರೋಬ್ಬರಿ 2 ಕೋಟಿ ರೂ. ಸುಪಾರಿ ಪಡೆದಿದೆ. ಕುಖ್ಯಾತ ರೌಡಿಶೀರ್ ವಿಲ್ಸನ್ ಗಾರ್ಡನ್ ನಾಗನಿಂದ ರೆಡ್ಡಿ ಹತ್ಯೆಗೆ ಪ್ಲಾನ್ ಕೂಡ ಮಾಡಲಾಗಿತ್ತು. 

ಹೌದು, 2 ಕೋಟಿ ರೂ.ಗೆ ಸುಪಾರಿ ಪಡೆದುಕೊಂಡಿದ್ದ ವಿಲ್ಸನ್‌ ಗಾರ್ಡರನ್‌ ನಾಗನ ತಂಡವು ಸದ್ಯದಲ್ಲೇ ಸತೀಶ್​ ರೆಡ್ಡಿ ಮೇಲೆ ದಾಳಿಗೆ ಸಂಚು ರೂಪಿಸಿತ್ತು. ಈ ಹಿನ್ನೆಲಯಲ್ಲಿ ಶಾಸಕ ಸತೀಶ್ ರೆಡ್ಡಿ ಎಲ್ಲ ಚಲನವಲನಗಳನ್ನು ಹಾಗೂ ದಿನನಿತ್ತ ಕಾರ್ಯ ವೈಖರಿಗಳನ್ನು ಫಾಲೋ ಮಾಡಲಾಗುತ್ತಿತ್ತು. ಆದರೆ, ಸ್ವಲ್ಪದರಲ್ಲೇ ಎಚ್ಚೆತ್ತುಕೊಂಡ ಶಾಸಕ ಸತೀಶ್ ರೆಡ್ಡಿ ಮರ್ಡರ್‌ ಸ್ಕೆಚ್‌ನಿಂದ ಪಾರಾಗಿದ್ದಾರೆ. ಅವರಿಗೆ ಕೊಲೆ ಮಾಡುವ ಬಗ್ಗೆ ಮಾಡಲಾದ ಸಂಚು ತಿಳಿದಿದ್ದು, ಕೂಡಲೆ ಎಚ್ಚೆತ್ತುಕೊಂಡು ಪೊಲೀಸರಿಗೆ ಈ ಬಗ್ಗೆ ದೂರು ನೀಡಿ ರಕ್ಷಣೆ ನೀಡುವಂತೆ ತಿಳಿಸಿದ್ದಾರೆ. 

Related Video