ಶಿರಾ ಬೈ ಎಲೆಕ್ಷನ್: ಸಂದರ್ಶನದಲ್ಲಿ ಮಹತ್ವದ ವಿಷಯಗಳನ್ನ ಬಿಚ್ಚಿಟ್ಟ ವಿಜಯೇಂದ್ರ

ವಿಜಯೇಂದ್ರ ಅವರನ್ನ ಸುವರ್ಣ ನ್ಯೂಸ್ ಸಂದರ್ಶನ ಮಾಡಿದ್ದು, ಈ ವೇಳೆ ಮಹತ್ವದ ವಿಷಯಗಳನ್ನ ಹಂಚಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಅ.26): ಸಿಎಂ ಬಿಎಸ್ ಯಡಿಯೂರಪ್ಪ ಅವರ ಇಬ್ಬರು ಮಕ್ಕಳಾದ ಬಿ.ವೈ. ರಾಘವೇಂದ್ರ ಮತ್ತು ಬಿ.ವೈ. ವಿಜಯೇಂದ್ರ ಅವರು ಸಾಕಷ್ಟು ವರ್ಷಗಳಿಂದ ಅಪ್ಪನ ಜೊತೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ. ಹಿರಿಯ ಮಗ ರಾಘವೇಂದ್ರ ಅವರು ಹಲವು ವರ್ಷಗಳ ಹಿಂದೆಯೆ ಚುನಾವಣಾ ರಾಜಕಾರಣಕ್ಕೆ ಧುಮುಕಿದ್ದಾರೆ. ಕಿರಿಯ ಮಗ ವಿಜಯೇಂದ್ರ ಅವರು ಯಡಿಯೂರಪ್ಪ ಅವರ ನೆರಳಿನಲ್ಲೇ ರಾಜಕಾರಣ ನಡೆಸುತ್ತಾ ಬಂದಿದ್ದಾರೆ.

ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾದಲ್ಲೂ ಗೆಲ್ಲಲು ವಿಜಯೇಂದ್ರ ತಂತ್ರ

ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ವಿಜಯೇಂದ್ರ, ತಮ್ಮ ತಂದೆಯ ಬೆನ್ನೆಲುಬಾಗಿ ನಿಂತಿದ್ದಾರೆ. ಕ್ಷೇತ್ರದ ಸಮಸ್ಯೆ, ಪಕ್ಷ ಸಂಘಟನೆ, ಉಪಚುನಾವಣೆ ಹೀಗೆ ಬಹುತೇಕ ಎಲ್ಲಾ ವಿಚಾರಗಳಲ್ಲೂ ವಿಜಯೇಂದ್ರ ಅವರೇ ಪಾಯಿಂಟ್ ಆಫ್ ಕಾಂಟ್ಯಾಕ್ಟ್ ಎಂಬಂತಾಗಿದೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದ ವಿಜಯೇಂದ್ರ ಇದೀಗ, ಶಿರಾ ಅಖಾಡಕ್ಕಿಳಿದಿದ್ದಾರೆ. ಈ ಬಗ್ಗೆ ವಿಜಯೇಂದ್ರ ಅವರನ್ನ ಸುವರ್ಣ ನ್ಯೂಸ್ ಸಂದರ್ಶನ ಮಾಡಿದ್ದು, ಈ ವೇಳೆ ಮಹತ್ವದ ವಿಷಯಗಳನ್ನ ಹಂಚಿಕೊಂಡಿದ್ದಾರೆ.

Related Video