ಸಿದ್ದರಾಮೋತ್ಸವಕ್ಕೆ ಒಂದು ವರ್ಷ.. ಸಿದ್ದು ಚರಿಷ್ಮಾವನ್ನೇ ಬದಲಿಸಿದ್ದು ಹೇಗೆ "ದಾವಣಗೆರೆ" ಸಮಾವೇಶ..?

ಸಿದ್ದರಾಮೋತ್ಸವಕ್ಕೆ ಒಂದು ವರ್ಷ..ಸಿದ್ದುಗೆ ರಾಜಪಟ್ಟ..!
ಸಿದ್ದು-ಡಿಕೆ ಸಂಘರ್ಷಕ್ಕೆ ಬ್ರೇಕ್ ಹಾಕಿತ್ತು ಸಿದ್ದರಾಮೋತ್ಸವ
ಸಿದ್ದರಾಮೋತ್ಸವದಲ್ಲೇ ಬಿಜೆಪಿ ವಿರುದ್ಧ ಮೊಳಗಿತ್ತು ರಣಕಹಳೆ..!

First Published Aug 4, 2023, 1:52 PM IST | Last Updated Aug 4, 2023, 1:52 PM IST

ಅದೊಂದು ಸಮಾವೇಶ ಸಿದ್ದರಾಮಯ್ಯನವರಿಗೆ(Siddaramaiah) ಮುಖ್ಯಮಂತ್ರಿ ಪಟ್ಟ ತಂದು ಕೊಟ್ಟಿತ್ತು. ಅದೊಂದು ಸಮಾವೇಶ ರಾಜ್ಯದಲ್ಲಿ ಕಾಂಗ್ರೆಸ್"ಗೆ ಅಧಿಕಾರದ ಗದ್ದುಗೆ ಸಿಗಲು ಮುನ್ನುಡಿ ಬರೆದಿತ್ತು. ಸರಿಯಾಗಿ ಒಂದು ವರ್ಷದ ಹಿಂದೆ.. ಯಾವ ನೆಲವನ್ನು ಕರ್ನಾಟಕದ ಸೆಂಟರ್ ಪಾಯಿಂಟ್ ಅಂತ ಕರೆಯಲಾಗುತ್ತೋ, ಯಾವ ನೆಲ ಕರ್ನಾಟಕದಲ್ಲಿ ರಾಜಕೀಯ ಚರಿತ್ರೆಗಳ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ಯೋ, ಅದೇ ನೆಲದಲ್ಲಿ ಅವತ್ತು ಸಿದ್ದರಾಮಯ್ಯನವರು ಅಕ್ಷರಶಃ ವಿಜೃಂಭಿಸಿ ಬಿಟ್ಟಿದ್ರು. ಒಂದೇ ಕಲ್ಲಿಗೆ ಹತ್ತಾರು ಹಕ್ಕಿಗಳನ್ನು ಹೊಡೆದು ಬಿಟ್ಟಿದ್ರು. ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯವನವರ ಸಿದ್ದಾಶ್ವಮೇಧ ಯಜ್ಞ ಶುರುವಾಗಿದ್ದು ಅಲ್ಲೇ. ಅಲ್ಲಿಂದ ಶುರು ಕೌಂಟ್'ಡೌನ್.. 291 ದಿನಗಳ ನಂತ್ರ ನೋಡಿದ್ರೆ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿ. ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸಿದ್ದರಾಮೋತ್ಸವಕ್ಕೆ(Siddaramautsava) ಗುರುವಾರ ಭರ್ತಿ ಒಂದು ವರ್ಷ.ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(dk shivakumar), ಸಿದ್ದರಾಮಯ್ಯ ಕೀ ಜೈ ಅಂತ ಹೇಳ್ತಾ ಇದ್ದಂತೆ ಮೊಳಗಿದ ಸದ್ದು, ಅಷ್ಟದಿಕ್ಕುಗಳಲ್ಲಿ ಮಾರ್ಧನಿಸಿತ್ತು. ಕರ್ನಾಟಕ ಕುರುಕ್ಷೇತ್ರದಲ್ಲಿ ಕಾಂಗ್ರೆಸ್ ಅಶ್ವಮೇಧದ ಅಸಲಿ ರೂಪ ಶುರುವಾಗಿದ್ದೇ ಅಲ್ಲಿಂದ. 

ಇದನ್ನೂ ವೀಕ್ಷಿಸಿ:  ನಡ್ಡಾ ಭೇಟಿ ಮಾಡಿದ ಸಿ.ಟಿ.ರವಿ: ದೆಹಲಿ ಕಚೇರಿ ಖಾಲಿ ಮಾಡಿದ ಬಿಜೆಪಿ ನಾಯಕ