Asianet Suvarna News Asianet Suvarna News

ನಡ್ಡಾ ಭೇಟಿ ಮಾಡಿದ ಸಿ.ಟಿ.ರವಿ: ದೆಹಲಿ ಕಚೇರಿ ಖಾಲಿ ಮಾಡಿದ ಬಿಜೆಪಿ ನಾಯಕ

ದೆಹಲಿ ಕಚೇರಿ ಖಾಲಿ ಮಾಡಿದ ಸಿ ಟಿ ರವಿ
ಜೋರಾಯ್ತು ರಾಜ್ಯಾಧ್ಯಕ್ಷ ಹುದ್ದೆ ಗುಸುಗುಸು
ಬಿಜೆಪಿ ರಾಜ್ಯಾಧ್ಯಕ್ಷ ಆಗ್ತಾರಾ ಸಿ .ಟಿ. ರವಿ..?

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ ಟಿ ರವಿ (CT Ravi) ತೆರವು ಮಾಡಲಾಗಿದೆ. ಈ ಮೂಲಕ 2 ವರ್ಷ 8 ತಿಂಗಳ ದೆಹಲಿ ಜವಾಬ್ದಾರಿ ಕೊನೆಯಾಗಿದೆ. ಇದರ ಬೆನ್ನಲ್ಲೇ ದೆಹಲಿ ಕಚೇರಿಯನ್ನು ಸಿ.ಟಿ. ರವಿ ಖಾಲಿ ಮಾಡಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಹುದ್ದೆ( State president post) ಗುಸುಗುಸು ಜೋರಾಗಿದೆ. ಅಲ್ಲದೇ ಸಿ.ಟಿ. ರವಿನೇ ರಾಜ್ಯಾಧ್ಯಕ್ಷ ಆಗುತ್ತಾರಾ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿವೆ. ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾರನ್ನು(BJP President JP Nadda) ಸಿ.ಟಿ. ರವಿ ಭೇಟಿ ಮಾಡಿದ್ದಾರೆ. ನಡ್ಡಾ ಭೇಟಿ ವೇಳೆ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ಚರ್ಚೆ ನಡೆದೇ ಇಲ್ಲ ಎಂದು ಹೇಳಲಾಗುತ್ತಿದೆ. ಕೇವಲ ಬೀಳ್ಗೊಡುಗೆಗೆ ಮಾತ್ರ ಸಿ.ಟಿ ರವಿ ಮಾತುಕತೆ ಸೀಮಿತವಾಗಿದೆ. ಈ ಮೂಲಕ ರಾಜ್ಯಾಧ್ಯಕ್ಷ ನಿರೀಕ್ಷೆಯಲ್ಲಿದ್ದ ಸಿ ಟಿ ರವಿಗೆ ನಿರಾಸೆಯಾಗಿದೆ.

ಇದನ್ನೂ ವೀಕ್ಷಿಸಿ:  ಸಚಿವರಿಗೆ ಸುರ್ಜೇವಾಲಾ ಟಾಸ್ಕ್: ಪಕ್ಷದ ಅಭ್ಯರ್ಥಿಗೆ ಸೋಲಾದ್ರೆ ಸಚಿವ ಸ್ಥಾನಕ್ಕೆ ಕುತ್ತು ಬರುತ್ತಾ?

Video Top Stories