'ಮುಂದೊಂದು ದಿನ ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಆಗ್ತಾರೆ'

ಆರ್‌ಆರ್‌ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಕೃಷ್ಣಮೂರ್ತಿ ಪರ ಎಚ್‌ಡಿಕೆ ಪ್ರಚಾರ ನಡೆಸಿದರು. ಆಗ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಅ. 28): ಆರ್‌ಆರ್‌ ನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಕೃಷ್ಣಮೂರ್ತಿ ಪರ ಎಚ್‌ಡಿಕೆ ಪ್ರಚಾರ ನಡೆಸಿದರು. ಆಗ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಕೃಷ್ಣಮೂರ್ತಿಯವರು ಜೆಡಿಎಸ್‌ಗೆ ಮಾರಾಟವಾಗಿದ್ದಾರೆ ಎಂಬ ಸುದ್ದಿಗೆ ಏನು ಹೇಳುತ್ತೀರಿ? ಅಂದಾಗ, ಜೆಡಿಎಸ್‌ ಬಗ್ಗೆ ಜನರಿಗೆ ಒಲವು ಮೂಡುತ್ತಿರುವುದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಯವರಿಗೆ ಆತಂಕ ಶುರುವಾಗಿದೆ. ಹಾಗಾಗಿ ಅಪಪ್ರಚಾರ ಮಾಡಲು ಶುರು ಮಾಡಿದ್ದಾರೆ. ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಮುಂದಿನ 3 ದಿನಗಳ ಕಾಲ ರಾಜರಾಜೇಶ್ವರಿ ನಗರದಲ್ಲಿರುತ್ತೇನೆ. ನಿಖಿಲ್ ಕೂಡಾ ಬರುತ್ತಾರೆ' ಎಂದಿದ್ದಾರೆ. 

'ಮುನಿರತ್ನ ತಾಯಿಯನ್ನು ಮಾರಾಟ ಮಾಡಿದ್ದಾನೆ ಅಂತೀರಲ್ಲ, ತೀರಿ ಹೋಗಿರುವ ಅಮ್ಮನನ್ನು ಎಲ್ಲಿಂದ ತರಲಿ'

ಜೆಡಿಎಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವ ಆರೋಪಕ್ಕೆ, ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ದಿನ ಮುಂದೊಂದು ದಿನ ಬರುತ್ತದೆ. ಆಗ ನಾನು ಚರ್ಚೆ ಮಾಡುತ್ತೇನೆ' ಎಂದು ಹೇಳಿದ್ದಾರೆ. 

Related Video