ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾಯಕತ್ವ ಸಂಘರ್ಷ ತಾರಕಕ್ಕೇರಿದೆ. ಅಧಿಕಾರ ಹಂಚಿಕೆಯ 'ಕೊಟ್ಟ ಮಾತನ್ನು' ಡಿ.ಕೆ. ಶಿವಕುಮಾರ್ ಬಣ ನೆನಪಿಸುತ್ತಿದ್ದು, ಈ ಮಾತಿನ ಸಮರದ ಅಂತಿಮ ನಿರ್ಧಾರಕ್ಕಾಗಿ ಎಲ್ಲರ ಕಣ್ಣು ದೆಹಲಿಯ ಹೈಕಮಾಂಡ್‌ನತ್ತ ನೆಟ್ಟಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ನ.28): ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿದ್ದು, ಇದೀಗ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾಯಕತ್ವ ಸಂಘರ್ಷ ತಾರಕಕ್ಕೇರಿದೆ. ಈ ಕಾದಾಟದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ (ಡಿಕೆಶಿ) ಬಣವು 'ಕೊಟ್ಟ ಮಾತು ಉಳಿಸಿಕೊಳ್ಳುವುದು ಜಗತ್ತಿನ ದೊಡ್ಡ ಶಕ್ತಿ' ಎಂಬ ಅಸ್ತ್ರವನ್ನು ಪ್ರಯೋಗಿಸುತ್ತಿದೆ.

ಡಿಕೆ ಶಿವಕುಮಾರ್ ಮತ್ತು ಸಹೋದರ ಡಿ.ಕೆ. ಸುರೇಶ್ ಅವರು ಪದೇ ಪದೇ 'ಕೊಟ್ಟ ಮಾತನ್ನು' ನೆನಪಿಸುತ್ತಿದ್ದಾರೆ. ಇದು, ಅಧಿಕಾರ ಹಂಚಿಕೆ ಕುರಿತು ಈ ಹಿಂದೆ ಹೈಕಮಾಂಡ್‌ನೊಂದಿಗೆ ನಡೆದ ಮಾತುಕತೆಯ ಸುಳಿವು ಎಂದು ವಿಶ್ಲೇಷಿಸಲಾಗುತ್ತಿದೆ. ಡಿಕೆಶಿ "ವರ್ಡ್ ಪವರ್ ಇಸ್ ವರ್ಲ್ಡ್ ಪವರ್" ಎಂದು ಘೋಷಿಸುವ ಮೂಲಕ, ತಾವು ಮತ್ತು ತಮ್ಮ ಬೆಂಬಲಿಗರು 'ಮಾತು' ಎಂಬ ಒಂದೇ ಅಸ್ತ್ರದ ಮೂಲಕ ಒತ್ತಡ ಹೇರುತ್ತಿದ್ದಾರೆ.

ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!

ಡಿಕೆಶಿ ಅವರ ಪೋಸ್ಟ್‌ಗಳಿಗೆ ಪ್ರತಿಕ್ರಿಯೆಯಾಗಿ ಸಿಎಂ ಸಿದ್ದರಾಮಯ್ಯ ಸಹ ತಮ್ಮ ಮಾತಿನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. "ನಮ್ಮ ಮಾತು ಕೇವಲ ಘೋಷಣೆಯಲ್ಲ.. ಅದೇ ನಮ್ಮ ಜಗತ್ತು," ಎಂದು ಪೋಸ್ಟ್ ಮಾಡುವ ಮೂಲಕ ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ತಮ್ಮ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿದಿದ್ದಾರೆ. 'ಮಾತಿನ ಸಮರ' ತೀವ್ರಗೊಂಡಿರುವ ಬೆನ್ನಲ್ಲೇ, ನಾಯಕತ್ವ ಸಂಘರ್ಷದಲ್ಲಿ ಎರಡೂ ಬಣಗಳ ಪರವಾಗಿ ಸೋಲು-ಗೆಲುವನ್ನು ನಿರ್ಧರಿಸುವ 'ಧರ್ಮಾಸ್ತ್ರ'ಗಳ (ಜಾತಿ/ಸಮುದಾಯ ಆಧರಿತ ಬೆಂಬಲ) ಪ್ರಯೋಗವೂ ಶುರುವಾಗಿದೆ. ಈ ಆಂತರಿಕ ಯುದ್ಧದ ಅಂತಿಮ ನಿರ್ಧಾರಕ್ಕಾಗಿ ಎಲ್ಲರ ಕಣ್ಣು ಈಗ ದೆಹಲಿಯತ್ತ ನೆಟ್ಟಿದೆ.

Related Video