ಬಿಜೆಪಿಗೆ ಹತಾಶೆ, ಪ್ರತಿಭಟನೆಗೆ ಸರ್ಕಾರದ ಕುಮ್ಮಕ್ಕು: ಸಿದ್ದರಾಮಯ್ಯ ಕಿಡಿ

ಸಿಎಂ ಬಂದಿದ್ದರೆ ಪೊಲೀಸರು ಹೀಗೆ ಮಾಡ್ತಿದ್ರಾ ಅಂತ ಕೊಡಗು ಪೊಲೀಸರ ವಿರುದ್ಧ ಗರಂ ಆದ ಸಿದ್ದರಾಮಯ್ಯ

First Published Aug 19, 2022, 1:47 PM IST | Last Updated Aug 19, 2022, 1:47 PM IST

ಚಿಕ್ಕಮಗಳೂರು(ಆ.19):  ನನ್ನ ವಿರುದ್ಧ ಪ್ರತಿಭಟನೆಗೆ ಸರ್ಕಾರವೇ ಕುಮ್ಮಕ್ಕು ನೀಡಿದೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಹತಾಶೆಯಿಂದ ನನ್ನ ವಿರುದ್ಧ ಪ್ರತಿಭಟನೆಯನ್ನ ಮಾಡಿಸಲಾಗಿದೆ. ಗೋ ಬ್ಯಾಕ್‌ ಅಂದ್ರೆ ಎಲ್ಲಿಗೆ ಹೋಗಲಿ, ಗೋ ಬ್ಯಾಕ್‌ ಸಿಎಂ ಅಂತ ನಮ್ಮವರು ಹೇಳ್ತಾರೆ, ಭದ್ರತೆ ನೀಡೋದು ಪೊಲೀಸರ ಜವಾಬ್ದಾರಿ, ಪ್ರತಿಭಟನೆ ಮಾಡೋದು ಗೊತ್ತಿದ್ದು ಪೊಲೀಸರು ಸುಮ್ಮನಿದ್ದಾರೆ. ಅದೇ ಸಿಎಂ ಬಂದಿದ್ದರೆ ಪೊಲೀಸರು ಹೀಗೆ ಮಾಡ್ತಿದ್ರಾ ಅಂತ ಕೊಡಗು ಪೊಲೀಸರ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ. ನಿನ್ನೆ ಕೊಡಗಿಗೆ ಬಂದಿದ್ದ ವೇಳೆ ಸಿದ್ದರಾಮಯ್ಯಗೆ ಪ್ರತಿಭಟನೆಯ ಬಿಸಿ ತಟ್ಟಿತ್ತು. 

ದೇಶದ ಚೌಕಿದಾರನ ರಕ್ಷಣೆಗೆ ರಾಜ್ಯದ ರಣಬೇಟೆಗಾರ!

Video Top Stories