Asianet Suvarna News Asianet Suvarna News

ದೇಶದ ಚೌಕಿದಾರನ ರಕ್ಷಣೆಗೆ ರಾಜ್ಯದ ರಣಬೇಟೆಗಾರ!

ಮೋದಿ ವಿಶೇಷ ಭದ್ರತಾ ಪಡೆಗೆ ಈಗ ಕರುನಾಡಿನ ಕಡುವೀರನೂ  ಎಂಟ್ರಿ ಕೊಟ್ಟಾಯ್ತು..  ಎದುರಾಗೋ ಆಪತ್ತು ಎಂಥದ್ದೇ ಇರಲಿ.. ಅದನ್ನೆಲ್ಲಾ ಪತ್ತೆ ಹಚ್ಚೋ ರಣಬೇಟೆಗಾರ ಈತ.. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಈತನಿಗೆ ಸಿಕ್ಕಿರೋ ಮನ್ನಣೆ ಗೌರವ ಅಷ್ಟಿಷ್ಟಲ್ಲ.. 6 ತಿಂಗಳ ಪ್ಲಾನಿಂಗ್.. 2 ತಿಂಗಳ ಟ್ರೇನಿಂಗ್ ಕೊಟ್ಟು, ಮೋದಿ ಭದ್ರತೆಯ ಅದಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ.. 
 

Aug 19, 2022, 1:17 PM IST

ಬೆಂಗಳೂರು (ಆ.19): ಕರ್ನಾಟಕದ ದೇಶೀಯ ನಾಯಿಗಳ ತಳಿಯಾದ ಮುಧೋಲ್ ಹೌಂಡ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಒದಗಿಸುವ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಸ್ಕ್ವಾಡ್‌ಗೆ ಸೇರ್ಪಡೆಗೊಂಡಿವೆ. ಅದರೊಂದಿಗೆ ಪ್ರಧಾನಿ ಭದ್ರತೆಯ ಟೀಮ್‌ನಲ್ಲಿ ಮುಧೋಳವೀರನಿಗೆ ಅತೀದೊಡ್ಡ ಜವಾಬ್ದಾರಿ ಸಿಕ್ಕಂತಾಗಿದೆ.

ಮುಧೋಳ ತಳಿಗಳು, ಈಗಾಗ್ಲೇ ಗಡಿಯನ್ನೂ ಕಾಯುತ್ತಿವೆ. ಭಾರತೀಯಸ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ತಳಿಯ ಶ್ವಾನಗಳು ಇನ್ಮುಂದೆ ಪ್ರಧಾನಿ ಅವರನ್ನೂ ಕಾಪಾಡಲಿವೆ. ಹಾಗಾದರೆ, ಈ ಶ್ವಾನಗಳಲ್ಲಿರುವ ಸ್ಪೆಷಾಲಿಟಿ ಏನು? ಯಾವ ಕಾರಣಕ್ಕಾಗಿ ಮೋದಿ ಭದ್ರತೆಗೆ ಇಂಥ ಶ್ವಾನಗಳನ್ನು ಎಸ್‌ಪಿಜಿ ಪಡೆಗೆ ಸೇರಿಸಿದ್ದಾರೆ ಎನ್ನೋದರ ಕಂಪ್ಲೀಟ್‌ ರಿಪೋರ್ಟ್‌.

ಮೋದಿ ಭದ್ರತಾ ಪಡೆಗೆ ಮುಧೋಳ ನಾಯಿಗಳು: ಕರ್ನಾಟಕಕ್ಕೆ ಕೀರ್ತಿ

ಹೆಮ್ಮೆಯ ಸಂಕೇತವಾಗಿರೋ ಮುಧೋಳ ತಳಿ ಶ್ವಾನಗಳಿಗೆ ಒಂದು ಇತಿಹಾಸವೇ ಇದೆ. ದೇಶದ ಪ್ರಧಾನಿಗಳ ರಕ್ಷಣೆ ಮಾಡೋದು ಅಂದ್ರೆ, ಅದು ದೇಶವನ್ನೇ ಕಾದಹಾಗೆ. ಪ್ರಧಾನಿ ಮೋದಿ ಅವರ ರಕ್ಷಣೆ ಕೊಡೋ್ಕ್ಕೆ ಅಂತಲೇ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ ಇದೆ. ಅವರ ಬಳಿ ಅತ್ಯಾಧುನಿಕ, ಅತಿ ಸುಧಾರಿತ ಆಯುಧಗಳೂ ಇವೆ. ಇದೆಲ್ಲದರ ಜೊತೆಗೆ, ಈಗ ನಮ್ಮ ಮುಧೋಳ ನಾಯಿಗಳೂ ಕೂಡ, ಆ ರಕ್ಷಣಾ ಪಡೆಯ ಭಾಗವಾಗಿದೆ.