Asianet Suvarna News Asianet Suvarna News

ಕುಮಾರಸ್ವಾಮಿ ಪ್ರಕಾರ ವಿಪಕ್ಷ ಸ್ಥಾನ ಅಂದ್ರೆ ಪುಟಗೋಸಿನಾ?: HDK ವಿರುದ್ಧ ಸಿದ್ದು ಏಕವಚನದಲ್ಲಿ ವಾಗ್ದಾಳಿ

Oct 13, 2021, 1:32 PM IST

ಹಾವೇರಿ(ಅ.13): ಕುಮಾರಸ್ವಾಮಿ-ಸಿದ್ದರಾಮಯ್ಯ ಮಧ್ಯೆ ವಾಕ್ಸಮರ ನಡೆಯುತ್ತಿದೆ. ಕುಮಾರಸ್ವಾಮಿ ಪುಟಗೋಸಿ ಹೇಳಿಕೆಗೆ ಸಿದ್ದು ಏನಂತಾರೆ?. ಪುಟಗೋಸಿ ವಿರೋಧ ಪಕ್ಷದ ಸ್ಥಾನ ಅಂತ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಇದೀಗ ಕುಮಾರಸ್ವಾಮಿ ಹೇಳಿಕೆಗಳಿಗೆ ಸಿದ್ದರಾಮಯ್ಯ ಖಡಕ್‌ ಆಗಿ ಉತ್ತರ ಕೊಟ್ಟಿದ್ದಾರೆ.ಇವರ ಪ್ರಕಾರ ವಿರೋಧ ಪಕ್ಷದ ಸ್ಥಾನ ಅಂದ್ರೆ ಪುಟಗೋಸಿನಾ?. ಸಂವಿಧಾನಾತ್ಮಕ ಹುದ್ದೆ ಬಗ್ಗೆ ಒಬ್ಬ ಸಿಎಂ ಆಗಿದ್ದವನು ಹೀಗಾ ಮಾತಾಡೋದು?. ಇದು ವಿರೋಧ ಪಕ್ಷದ ಸ್ಥಾನಕ್ಕೆ ಮಾಡಿದ ಅಪಮಾನ ಅಲ್ಲವೇ? ಅಂತ ಹೇಳುವ ಮೂಲಕ ಎಚ್‌ಡಿಕೆ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ಹಾವೇರಿ: ಹಾನಗಲ್‌ ಬೈಎಲೆಕ್ಷನ್‌ ಗೆಲ್ಲಲು ಬಿಜೆಪಿ ಮಾಸ್ಟರ್‌ ಪ್ಲ್ಯಾನ್‌