ಆರ್‌ಎಸ್ಎಸ್‌ ಸಮನ್ವಯ ಬೈಠಕ್‌: ಪುತ್ತೂರು ಗಲಾಟೆ, ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ

ಮಂಗಳೂರಿನಲ್ಲಿ ಇಂದು ಆರ್‌ಎಸ್‌ಎಸ್‌ನಿಂದ ಸಮನ್ವಯ ಬೈಠಕ್‌ ನಡೆಯಲಿದೆ. ಇದರಲ್ಲಿ ಹಲವು ಸಂಘಟನೆಗಳು ಭಾಗಿಯಾಗಲಿವೆ.
 

Share this Video
  • FB
  • Linkdin
  • Whatsapp

ಮಂಗಳೂರು: ಇಂದು ಮಂಗಳೂರಿನಲ್ಲಿ ಆರ್‌ಎಸ್‌ಎಸ್‌ನಿಂದ ಸಮನ್ವಯ ಬೈಠಕ್‌ ನಡೆಯಲಿದೆ.ಕಳೆದ ಒಂದು ವರ್ಷದಿಂದ ಇಲ್ಲಿ ಬೈಠಕ್‌ ನಡೆದಿರಲಿಲ್ಲ. ವಿಧಾನಸಭಾ ಚುನಾವಣೆ ಮುಗಿದ ಮೇಲೆ ದಕ್ಷಿಣ ಕನ್ನಡದಲ್ಲಿ ಮೊದಲ ಬೈಠಕ್‌ ನಡೆಯುತ್ತಿದೆ. ಇಲ್ಲಿ ಪುತ್ತೂರಿನ ಗಲಾಟೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎಂಬುದರ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಬೈಠಕ್‌ಗೆ ನಳಿನ್‌ ಕುಮಾರ್‌ ಕಟೀಲ್‌ ಆಗಮಿಸುವ ಸಾಧ್ಯತೆ ಇದೆ. ಅಲ್ಲದೇ ಬಿಜೆಪಿ, ವಿಹೆಚ್‌ಪಿ, ಭಜರಂಗದಳ, ಹಿಂಜಾವೇ ಹಾಗೂ ಎಬಿವಿಪಿ ಭಾಗಿಯಾಗಲಿವೆ. ಈ ಭಾಗದಲ್ಲಿ ಮೂರು ತಿಂಗಳಿಗೊಮ್ಮೆ ಬೈಠಕ್‌ ನಡೆಯುತ್ತಿತ್ತು. ಆದ್ರೆ ಕಳೆದ ಒಂದು ವರ್ಷದಿಂದ ಯಾವುದೇ ಬೈಠಕ್‌ ನಡೆದಿರಲಿಲ್ಲ.

ಇದನ್ನೂ ವೀಕ್ಷಿಸಿ: ಭಗತ್‌ ಸಿಂಗ್‌ ಹೆಸರು ಹೇಳಿಕೊಂಡು ಬಂದವರನ್ನೇ ಜೈಲಿಗೆ ಹಾಕ್ತಿರಾ?: ಎಂ.ಬಿ.ಪಾಟೀಲ್‌ಗೆ ಸೂಲಿಬೆಲೆ ತಿರುಗೇಟು

Related Video