ಶಾಸಕರು ವರ್ಸಸ್ ಸಚಿವರ ಮುನಿಸು: ಎರಡನೇ ದಿನವೂ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೀಟಿಂಗ್

6 ಜಿಲ್ಲೆಗಳ ವ್ಯಾಪ್ತಿಯ ಸಚಿವರು, ಶಾಸಕರ ಜೊತೆ ಮೀಟಿಂಗ್
ಶಾಸಕರ ಸಮಸ್ಯೆ ಆಲಿಸಿದ ಸಿಎಂರಿಂದ ಸಚಿವರಿಗೆ ನೀತಿಪಾಠ
ಕ್ಷೇತ್ರದಲ್ಲಿ ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿ
ಸಚಿವರು, ಶಾಸಕರು ಇಬ್ಬರಿಗೂ ಸಿದ್ದರಾಮಯ್ಯ ಬುದ್ಧಿ ಮಾತು
 

Share this Video
  • FB
  • Linkdin
  • Whatsapp

ಶಾಸಕರು ಮತ್ತು ಸಚಿವರ ಮುನಿಸಿಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 7 ಗಂಟೆವರೆಗೂ ಸಿಎಂ ಸಿದ್ದರಾಮಯ್ಯ(Siddaramaiah) ಸರಣಿ ಮೀಟಿಂಗ್ ನಡೆಸಲಿದ್ದಾರೆ. ಸೋಮವಾರ 6 ಜಿಲ್ಲೆಗಳ ಜೊತೆ ಸಭೆ(Meeting) ನಡೆಸಲಾಗಿದೆ. ಯಾದಗಿರಿ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಬಾಗಲಕೋಟೆ, ಧಾರವಾಡ ಜಿಲ್ಲೆ ವ್ಯಾಪ್ತಿಯ ಸಚಿವರು, ಶಾಸಕರ(MLAs) ಜೊತೆ ನಿನ್ನೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಶಾಸಕರುಗಳ ದೂರು ಆಲಿಸಿದ ಸಿಎಂ ಸಿದ್ದರಾಮಯ್ಯ ,ಆಯಾ ಜಿಲ್ಲಾ ವ್ಯಾಪ್ತಿಯ ಸಚಿವರು, ಉಸ್ತುವಾರಿ ಸಚಿವರಿಗೆ ಕಿವಿಮಾತು ಹೇಳಿದ್ದಾರೆ. ಕ್ಷೇತ್ರಗಳಿಗೆ ಶಾಸಕರ ಅನುದಾನದ ಬೇಡಿಕೆಗೂ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರಿಗೆ ಅಭಿಪ್ರಾಯ ಹೇಳಿಕೊಳ್ಳಲು ಮುಕ್ತ ಅವಕಾಶವನ್ನು ಸಿಎಂ ನೀಡಿದ್ದು, ವರ್ಗಾವಣೆ ವಿಚಾರ, ಲೋಕಸಭೆ ತಯಾರಿ, ಸಮನ್ವಯತೆ ಚರ್ಚೆ, ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆ, ಪರಿಹಾರದ ಕುರಿತು ಚರ್ಚೆ ನಡೆಸಲಾಗಿದೆ. 

ಇದನ್ನೂ ವೀಕ್ಷಿಸಿ: ಇಂದು ಅಮಿತ್ ಶಾ ಭೇಟಿಯಾಗಲಿರುವ ಬೊಮ್ಮಾಯಿ: ಕೇಂದ್ರ ಗೃಹ ಸಚಿವರ ಜೊತೆ ಮಹತ್ವದ ಮಾತುಕತೆ

Related Video