ಇಂದು ಅಮಿತ್ ಶಾ ಭೇಟಿಯಾಗಲಿರುವ ಬೊಮ್ಮಾಯಿ: ಕೇಂದ್ರ ಗೃಹ ಸಚಿವರ ಜೊತೆ ಮಹತ್ವದ ಮಾತುಕತೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯಾಗಲಿರುವ ಬೊಮ್ಮಾಯಿ
ರಾಜ್ಯದ ವಿದ್ಯಮಾನಗಳ ಕುರಿತು ಜೆಪಿ ನಡ್ಡಾ ಜೊತೆ ಬೊಮ್ಮಾಯಿ ಚರ್ಚೆ
ಲೋಕಸಭಾ ಚುನಾವಣೆ ಹಿನ್ನೆಲೆ ಪೂರ್ವ ಸಿದ್ದತೆ ಕುರಿತಾಗಿಯೂ ಚರ್ಚೆ
ಬಿಜೆಪಿಯಲ್ಲಿ ಇನ್ನೂ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ. ಈ ಚರ್ಚೆಯ ಮಧ್ಯೆಯೇ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಚುನಾವಣೆ(Election) ಸೋಲಿನ ಬಳಿಕ ಮೊದಲ ಬಾರಿ ದೆಹಲಿಗೆ ಬಸವರಾಜ ಬೊಮ್ಮಾಯಿ ತೆರಳಿದ್ದಾರೆ. ಹೈಕಮಾಂಡ್ ಬುಲಾವ್ ಮೇರೆಗೆ ದೆಹಲಿಗೆ ಮಾಜಿ ಸಿಎಂ ತೆರಳಿದ್ದಾರೆ. ಇಂದು ಬಿಜೆಪಿ ವರಿಷ್ಠ ಅಮಿತ್ ಶಾ ಭೇಟಿಯಾಗಲಿದ್ದು, ಮಹತ್ವದ ಮಾತುಕತೆಯನ್ನು ಅಮಿತ್ ಶಾ-ಬೊಮ್ಮಾಯಿ ನಡೆಸಲಿದ್ದಾರೆ. ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರನ್ನು ಬಸವರಾಜ ಬೊಮ್ಮಾಯಿ ಭೇಟಿಯಾಗಲಿದ್ದಾರೆ. ರಾಜ್ಯದ ವಿದ್ಯಮಾನಗಳ ಕುರಿತು ಜೆಪಿ ನಡ್ಡಾ ಜೊತೆ ಬೊಮ್ಮಾಯಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಪೂರ್ವ ಸಿದ್ದತೆ ಕುರಿತಾಗಿಯೂ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ನಿನ್ನೆ ರಾಜ್ಯದ ಸಂಸದರು, ಕೇಂದ್ರ ಸಚಿವರ ಜೊತೆ ಬೊಮ್ಮಾಯಿ ಮಾತುಕತೆ ನಡೆಸಿದ್ದರು.
ಇದನ್ನೂ ವೀಕ್ಷಿಸಿ: ಬೆಂಗಳೂರಿಗೆ ಇಂದು ರಾತ್ರಿ ಸ್ಪಂದನಾ ಮೃತದೇಹ: ನಾಳೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ