'ಕೈ'ಭಿನ್ನಮತಕ್ಕೆ ಬ್ರೇಕ್ ಹಾಕುತ್ತಾ ಸಿಎಂ ನೇತೃತ್ವದ ಸಭೆ? ಪಕ್ಷೇತರವಾಗಿ ನಿಲ್ಲುವಂತೆ ವೀಣಾ ಕಾಶಪ್ಪನವರ ಅಭಿಮಾನಿಗಳು ಪಟ್ಟು!
ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಭೆ
ಸಿಎಂ ಸಿದ್ದರಾಮಯ್ಯ ಗೃಹ ಕಚೇರಿಯಲ್ಲಿ ನಡೆಯಲಿರೋ ಸಭೆ
2 ದಿನದ ಹಿಂದೆ ವೀಣಾ ಕಾಶಪ್ಪನವರಗೆ ಕರೆ ಮಾಡಿದ್ದ ಸಿಎಂ
ಬಾಗಲಕೋಟೆ ಲೋಕಸಭಾ ಟಿಕೆಟ್ ಬದಲಾವಣೆಗೆ ವೀಣಾ ಕಾಶಪ್ಪನವರ(Veena Kashappanavar) ಬಿಗಿ ಪಟ್ಟು ಹಿಡಿದಿದ್ದಾರೆ. ಮತಕ್ಷೇತ್ರದದ ಹೊರಗೂ ಮುಂದುವರೆದ ಕೈ ಟಿಕೆಟ್(Ticket) ಕಗ್ಗಂಟು. ಇಂದು ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಗೃಹ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸಚಿವ ತಿಮ್ಮಾಪೂರ, ಶಿವಾನಂದ ಪಾಟೀಲ್, ಶಾಸಕ ವಿಜಯಾನಂದ ಕಾಶಪ್ಪನವರ, ಆಕಾಂಕ್ಷಿ ವೀಣಾ ಕಾಶಪ್ಪನವರ ಭಾಗಿಯಾಗಲಿದ್ದಾರೆ. ಜಿಲ್ಲೆಯ ಶಾಸಕರಿಗೂ ಸಭೆಗೆ ಆಹ್ವಾನ ನೀಡುವಂತೆ ವೀಣಾ ಕಾಶಪ್ಪನವರ ಮನವಿ ಮಾಡಿದ್ದಾರೆ. ಎರಡು ದಿನದ ಹಿಂದೆಯೇ ವೀಣಾ ಕಾಶಪ್ಪನವರಗೆ ಸಿಎಂ ಕರೆ ಮಾಡಿದ್ದರು. ಟಿಕೆಟ್ ಬದಲಾಯಿಸದಿದ್ದರೆ ಪಕ್ಷೇತರ ಸ್ಫರ್ಧೆ ಎಂದಿದ್ದ ವೀಣಾ. ಈಗಾಗಲೇ ಬೆಂಬಲಿಗರ, ಪಂಚಮಸಾಲಿ ಸಮುದಾಯದ ಸಭೆಯನ್ನು ವೀಣಾ ಕರೆದಿದ್ದಾರೆ.
ಇದನ್ನೂ ವೀಕ್ಷಿಸಿ: ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಡಿಕೆ ಸುರೇಶ್ ಉಮೇದುವಾರಿಕೆ: ಸಲ್ಲಿಕೆಗೂ ಮುನ್ನ ಡಿ ಕೆ ಸಹೋದರಿಂದ ಮನೆದೇವರಿಗೆ ಪೂಜೆ!