ಸಿದ್ದು ಡಿಕೆಶಿ ಸರ್ಕಾರದ ಮುಂದೆ ಸಾಲು-ಸಾಲು ಸವಾಲ್‌: ಕೊಟ್ಟಿರೋ ಗ್ಯಾರೆಂಟಿ ಪೂರೈಸೋಕೆ ಏನಿದೆ ಮಾರ್ಗ ?

ನುಡಿದಂತೆ ನಡೆಯಲು ನಾವು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ ಸಿದ್ದು ಸರ್ಕಾರ 5 ಯೋಜನೆಗಳಿಗೆ ಯಾವೆಲ್ಲಾ ಕಂಡಿಷನ್ಸ್‌ ಹಾಕಲಿದೆ ಎಂಬುದು ಇನ್ನೂ ತಿಳಿದಿಲ್ಲ.

First Published May 22, 2023, 10:18 AM IST | Last Updated May 22, 2023, 10:18 AM IST

ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಗೃಹ ಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ತಾತ್ವಿಕ ಅನುಮೋದನೆ ನೀಡಿದೆ. ಆದ್ರೆ ಕಾಂಗ್ರೆಸ್‌ನ ಈ ಎಲ್ಲಾ ಗ್ಯಾರೆಂಟಿಗೆ ಕಂಡಿಷನ್ಸ್ ಇರುತ್ತಾ ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ. ಒಂದು ವೇಳೆ ಕಂಡಿಷನ್ಸ್‌ ಹಾಕಿದ್ರೆ, ಎಲ್ಲರಿಗೂ ಈ ಭಾಗ್ಯಗಳಂತೂ ದೊರೆಯುವುದಿಲ್ಲ. ನಾವು ಆರ್ಥಿಕ ಹೊರೆಗೆ ಹೆದರಲ್ಲ, ಆದ್ರೆ ಎಲ್ರಿಗೂ ಗ್ಯಾರೆಂಟಿ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಈ ಮಾತಿನ ಹಿಂದಿನ ಮರ್ಮವೇನು ಎಂಬುದನ್ನು ಮುಂದೆ ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ: ರೂಪಾಲಿ ನಾಯ್ಕ್‌ ಕೃತಜ್ಞತಾ ಸಭೆ: ರಾಜಕೀಯ ವಿರೋಧಿಗಳ ವಿರುದ್ಧ ಅಬ್ಬರಿಸಿದ ಮಾಜಿ ಶಾಸಕಿ

Video Top Stories