ರೂಪಾಲಿ ನಾಯ್ಕ್‌ ಕೃತಜ್ಞತಾ ಸಭೆ: ರಾಜಕೀಯ ವಿರೋಧಿಗಳ ವಿರುದ್ಧ ಅಬ್ಬರಿಸಿದ ಮಾಜಿ ಶಾಸಕಿ

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ರೂಪಾಲಿ ನಾಯ್ಕ್‌ ಅತ್ಯಲ್ಪ ಮತಗಳಿಂದ ಸೋಲನ್ನು ಅನುಭವಿಸಿದ್ದಾರೆ. 

Share this Video
  • FB
  • Linkdin
  • Whatsapp

ಕಾರವಾರ: ಮಾಜಿ ಶಾಸಕಿ ರೂಪಾಲಿ ನಾಯ್ಕ್​ ಕೃತಜ್ಞತಾ ಸಭೆಯನ್ನು ಆಯೋಜಿಸಿ, ಮಾತನಾಡಿದರು. ನಮ್ಮ ಪಕ್ಷದ ಕೆಲವರು ಆಮಿಷಕ್ಕೆ ಬಲಿಯಾದ ಹಿನ್ನೆಲೆ ನನಗೆ ಸೋಲಾಗಿದೆ. ಆದ್ರೆ ಇದನ್ನು ಸೋಲು ಎಂದು ಭಾವಿಸಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿಸಬೇಕಿದೆ ಎಂದು ಅವರು ಹೇಳಿದರು. ಬಿಜೆಪಿ ಕಾರ್ಯಕರ್ತರ ಋಣ ತೀರಿಸಲು ಸಾಧ್ಯವಿಲ್ಲ. ಯಾವತ್ತೂ ಅಧಿಕಾರಕ್ಕಾಗಿ, ಕುರ್ಚಿಯಲ್ಲಿರಲು ಯಾವತ್ತೂ ಆಸೆ ಪಟ್ಟವಳಲ್ಲ. ಕಾರ್ಯಕರ್ತರ ನೋವು ನನಗೆ ಸಹಿಸಲಾಗಿಲ್ಲ. ಕರೆಯದಿದ್ದರೂ ಇಷ್ಟೊಂದು ಜನ ಸೇರಿರುವುದು ನೀವು ನನ್ನ ಮೇಲಿಟ್ಟ ಪ್ರೀತಿಗೆ ಸಾಕ್ಷಿ. ಇದರಿಂದಲೇ ನಾನಿನ್ನೂ ಇಲ್ಲಿ ಗಟ್ಟಿಯಾಗಿ ನಿಂತಿದ್ದೇನೆ ಎಂದರು.

ಇದನ್ನೂ ವೀಕ್ಷಿಸಿ: ಈ ದಿನ ಈಶ್ವರ-ಪಾರ್ವತಿಗೆ ಪೂಜೆ ಸಲ್ಲಿಸಿ: ನಿಮ್ಮ ಸೌಭಾಗ್ಯ ವೃದ್ಧಿಗೆ ಮುತ್ತೈದೆಯರಿಗೆ ಮಂಗಲ ದ್ರವ್ಯಗಳನ್ನು ಕೊಡಿ..

Related Video