ರಾಜ್ಯ Vsಕೇಂದ್ರ..ಏನಿದು ನ್ಯಾಯ-ಅನ್ಯಾಯದ ಸಮರ..? ಕೇಂದ್ರ ಸರ್ಕಾರದ ವಿರುದ್ಧ ಸಿದ್ದು ಸಂಗ್ರಾಮ..ಕೈ ರಣಕಹಳೆ..!

ಲೆಕ್ಕರಾಮಯ್ಯ ಬಿಚ್ಚಿಟ್ಟರು ತೆರಿಗೆ ಲೆಕ್ಕದ ರೋಚಕ ರಹಸ್ಯ..!
"ಸಿದ್ದು ದಿಲ್ಲಿ ಚಲೋ", ಕೇಂದ್ರದ ವಿರುದ್ಧ ಸಿದ್ದು ಯುದ್ಧ..!
ಬುಧವಾರ ದೆಹಲಿಯಲ್ಲಿ ಸಿದ್ದು ಸೇನೆಯ ಬೃಹತ್ ಪ್ರತಿಭಟನೆ..!
"ಜಂತರ್ ಮಂತರ್"ನಲ್ಲಿ ನಡೆಯಲಿದೆ ಕೈ ಶಕ್ತಿ ಪ್ರದರ್ಶನ..!

First Published Feb 6, 2024, 6:35 PM IST | Last Updated Feb 6, 2024, 6:35 PM IST

ಇದು ಲೆಕ್ಕರಾಮಯ್ಯ ಖ್ಯಾತಿಯ ಸಿದ್ದರಾಮಯ್ಯನವರು ಬಿಚ್ಚಿಟ್ಟಿರೋ ತೆರಿಗೆ ಲೆಕ್ಕ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ(Karnataka) ಅನ್ಯಾಯವಾಗ್ತಿದೆ ಅಂತ ಆರೋಪಿಸಿ ಸಿದ್ದು ಮೊಳಗಿಸಿರೋ ಲೆಕ್ಕಸಮರವಿದು. ತೆರಿಗೆ ಪಾಲು ಹಂಚಿಕೆಯಲ್ಲಿ ಮೋದಿ(Narendra Modi) ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡ್ತಿದೆ ಅಂತ ರಾಜ್ಯ ಕಾಂಗ್ರೆಸ್(Congress) ಸರ್ಕಾರ ಹಾದಿ ಬೀದಿಯಲ್ಲಿ ಆರೋಪಿಸ್ತಾ ಇದೆ. ಕೇಂದ್ರ ಬಜೆಟ್ ಮಂಡನೆಯ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಇಂಥದ್ದೊಂದು ಆರೋಪ ಕೇಳಿ ಬಂದಿದೆ. ಆರೋಪ ಮಾಡಿರೋದಷ್ಟೇ ಅಲ್ಲ, ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬುಧವಾರ ದಿಲ್ಲಿ ಚಲೋ ನಡೆಸಲಿದೆ. ಕಾಂಗ್ರೆಸ್‌ನ ದಿಲ್ಲಿ ಚಲೋ ಸಮರದ ಸೇನಾ ದಂಡನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah). ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗ್ತಿದೆ ಅನ್ನೋ ಆರೋಪ ಇವತ್ತು ನಿನ್ನೆಯದ್ದಲ್ಲ. ಕಳೆದ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಇಂಥದ್ದೊಂದು ಆರೋಪ ಕೇಳಿ ಬರ್ತಾನೇ ಇದೆ. ಆಗೆಲ್ಲಾ ಹಾದಿ ಬೀದಿ ಚರ್ಚೆಗೆ, ಸೋಷಿಯಲ್ ಮೀಡಿಯಾ ವಾಗ್ವಾದಕ್ಕೆ, ರಾಜಕೀಯ ವಾಕ್ಸಮರಗಳಿಗಷ್ಟೇ ಸೀಮಿತವಾಗಿದ್ದ ಈ ವಿಷ್ಯ, ಈಗ ರಾಜಧಾನಿ ದೆಹಯಲ್ಲಿ ಪ್ರತಿಧ್ವನಿಸೋದಕ್ಕೆ ರೆಡಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar) ನೇತೃತ್ವದಲ್ಲಿ ಕಾಂಗ್ರೆಸ್'ನ ಎಲ್ಲಾ ಶಾಸಕರು ಬುಧವಾರ ದೆಹಲಿಯ ಜಂತರ್ ಮಂತರ್'ನಲ್ಲಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಪಕ್ಷದ ಭವಿಷ್ಯ ನುಡಿದ ಮೋದಿ..! 2024ರ ಚುನಾವಣೆ ಬಗ್ಗೆ ಪ್ರಧಾನಿ ಹೇಳಿದ್ದೇನು..?

Video Top Stories