ಕಾಂಗ್ರೆಸ್ ಪಕ್ಷದ ಭವಿಷ್ಯ ನುಡಿದ ಮೋದಿ..! 2024ರ ಚುನಾವಣೆ ಬಗ್ಗೆ ಪ್ರಧಾನಿ ಹೇಳಿದ್ದೇನು..?

ಪ್ರತ್ಯೇಕ ದೇಶದ ಮಾತಿಗೆ ಅಬ್ಬರಿಸಿದ ಮೋದಿ..!
ಗಂಭೀರ ಮಾತಿನ ಮಧ್ಯ ಹಾಸ್ಯದ ಹೊನಲು..!
ಹೇಗಿತ್ತು ಪ್ರಧಾನಿಯ ಪವರ್ ಫುಲ್ ಸ್ಪೀಚ್..?
ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಮೋದಿ ಲೇವಡಿ..!

First Published Feb 6, 2024, 6:21 PM IST | Last Updated Feb 6, 2024, 6:21 PM IST

ಪ್ರಧಾನಿ ನರೇಂದ್ರ ಮೋದಿಯವರು ಇಂದು ನೂತನ ಸಂಸತ್ತಿನಲ್ಲಿ(Parliment) ಮಾತನ್ನಾಡಿದ್ರು. ತುಂಬಾ ಅಗ್ರೆಸ್ಸಿವ್ ಆಗಿಯೇ ಶುರುವಾದ ಭಾಷಣ ವಿಪಕ್ಷಗಳ ವಿರುದ್ಧ ದೊಡ್ಡ ಧ್ವನಿಯಲ್ಲೇ ಅಟ್ಯಾಕ್ ಮಾಡೋ ಸೂಚನೆಯನ್ನ ಕೊಟ್ಟಿತ್ತು. ಅಂತೆಯೇ ಮೋದಿ(Narendra Modi) ಸಂಸತ್ತಿನಲ್ಲಿ ತಮ್ಮ ರಾಜಕೀಯ ವಿರೋಧಿಗಳ ಮೇಲೆ ಸವಾರಿ ಮಾಡಿದರು. ವಿಪಕ್ಷಗಳು(Opposition Parties) ಒಂದು ಸಂಕಲ್ಪ ತಗೊಂಡಿವೆ. ಅವರ ಮಾತುಗಳನ್ನ ಕೇಳ್ತಾ ಇದ್ರೆ ನನಗೂ ನಮ್ಮ ದೇಶದ ಜನರಿಗೂ ಒಂದು ವಿಶ್ವಾಸ ಬಂದಿದ್ದು ಏನಂದ್ರೆ ಇವರು ತುಂಬಾ ಸಮಯಗಳ ಕಾಲ ವಿಪಕ್ಷ ಸ್ಥಾನದಲ್ಲೇ ಕೂರುವ ಸಂಕಲ್ಪ ಹೊಂದಿದ್ದಾರೆ. ಅನೇಕ ದಶಕಗಳ ಕಾಲ ನೀವು ಆಡಳಿತ ಪಕ್ಷದಲ್ಲಿ ಇದ್ರಿ, ಈಗ ಒಂದು ದಶಕದಿಂದ ವಿಪಕ್ಷದಲ್ಲಿ ಕೂತಿದ್ದೀರಿ. ಇನ್ನಷ್ಟು ವರ್ಷ ಕೂರುವ ಸಂಕಲ್ಪ ಪಡೆದಿದ್ದೀರಿ. ಈಶ್ವರನ ಸ್ವರೂಪವಾದ ಜನರು ನಿಮಗೆ ಆಶೀರ್ವಾದ ಮಾಡಲಿ. ಮುಂದಿನ ಚುನಾವಣೆ ಬಳಿಕ ದರ್ಶಕರ ಗ್ಯಾಲರಿಯಿಂದ ಸಂಸತ್ ವೀಕ್ಷಿಸಬಹುದು ಎಂದು ಮೋದಿ ಹೇಳಿದರು.

ಇದನ್ನೂ ವೀಕ್ಷಿಸಿ: Narendra Modi: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳಿಸಲಿದೆ : ಸಂಸತ್‌ನಲ್ಲಿ ಮೋದಿಯಿಂದ 2ನೇ ಅವಧಿ ಕೊನೆ ಭಾಷಣ

Video Top Stories