ಚುನಾವಣೆಗೂ ಮುಂಚೆ ಒಗ್ಗಟ್ಟು.. ಈಗ ಪಟ್ಟಕ್ಕಾಗಿ ಬಿಕ್ಕಟ್ಟು : ಯಾರಿಗೆ ಪಟ್ಟಾಭಿಷೇಕ ?
ಒಗ್ಗಟ್ಟಾಗಿ ಚುನಾವಣೆ ಗೆದ್ದವರ ಮಧ್ಯೆ ಪಟ್ಟಕ್ಕಾಗಿ ಫೈಟ್..!
"ಕೈ"ಕಮಾಂಡ್‌ಗೆ ಕಗ್ಗಂಟಾಯ್ತು ಸಿದ್ದು-ಡಿಕೆ ಜಂಗೀಕುಸ್ತಿ..!
ಸಿದ್ದು Vsಡಿಕೆಶಿ, ಕಾಂಗ್ರೆಸ್ ಹೈಕಮಾಂಡ್ ಶ್ರೀರಕ್ಷೆ ಯಾರಿಗೆ..?
ಒಗ್ಗಟ್ಟಾಗಿ ಚುನಾವಣೆ ಗೆದ್ದಾಯ್ತು. ಈಗ ಪಟ್ಟಕ್ಕಾಗಿ ಫೈಟ್. 135 ಸ್ಥಾನಗಳನ್ನು ಗೆಲ್ಲೋವರೆಗೆ ಅದೆಂಥಾ ಒಗ್ಗಟ್ಟು, ಅದೆಂಥಾ ದೋಸ್ತಿ. ಈಗ ನೋಡಿದ್ರೆ ದೋಸ್ತಿಗಳ ಮಧ್ಯೆ ಕುರ್ಚಿಗಾಗಿ ಕುಸ್ತಿ ನಡೆಯುತ್ತಿದೆ. ಮುಖ್ಯಮಂತ್ರಿ ಆಯ್ಕೆ ವಿಚಾರ ತಂತಿಯ ಮೇಲಿನ ನಡಿಗೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ ಈಗ ಅಕ್ಷರಶಃ ತಂತಿ ಮೇಲೆ ನಡೀತಾ ಇದೆ. ಇಕ್ಕಟ್ಟಿನಲ್ಲಿರೋ ಕೈ ಹೈಕಮಾಂಡ್ ಸಿಎಂ ಆಯ್ಕೆಯ ಬಿಕ್ಕಟ್ಟನ್ನು ಹೇಗೆ ಬಿಡುತ್ತದೆ ಎಂಬುದು ಪ್ರಶ್ನೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್'ನ ಈ ಸಂಧಾನ ಸೂತ್ರಕ್ಕೆ ಇಬ್ಬರೂ ಒಪ್ಪಿಕೊಳ್ತಾರಾ..? ಮೊದ್ಲು ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗೋದಕ್ಕೆ ಡಿಕೆಶಿ ಒಪ್ಪಿಗೆ ಕೊಡ್ತಾರಾ..? ಅಸಲಿಗೆ ಸಿಎಂ ಪಟ್ಟಕ್ಕೆ ಕನಕಪುರ ಬಂಡೆಯ ಗೇಮ್ ಪ್ಲಾನ್ ಏನು ಎಂಬುದು ಇನ್ನೂ ತಿಳಿದಿಲ್ಲ. ಮುಖ್ಯಮಂತ್ರಿ ಪಟ್ಟಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಭರ್ಜರಿ ಪೈಪೋಟಿ ಏರ್ಪಟ್ಟಿರುವ ಕಾರಣ ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ಹಂಚಿಕೆಯ ಸೂತ್ರ ಮುಂದಿಡುವ ಸಾಧ್ಯತೆಯಿದೆ.
ಇದನ್ನೂ ವೀಕ್ಷಿಸಿ: 'ದಿ ಕೇರಳ ಸ್ಟೋರಿ' ಸಿನಿಮಾ ಉಚಿತ ಪ್ರದರ್ಶನ, ಚಿತ್ರಮಂದಿರವನ್ನೇ ಬುಕ್ ಮಾಡಿದ ಯತ್ನಾಳ್