'ದಿ ಕೇರಳ ಸ್ಟೋರಿ' ಸಿನಿಮಾ ಉಚಿತ ಪ್ರದರ್ಶನ, ಚಿತ್ರಮಂದಿರವನ್ನೇ ಬುಕ್‌ ಮಾಡಿದ ಯತ್ನಾಳ್‌

ಅಪ್ಸರಾ ಚಿತ್ರಮಂದಿರದಲ್ಲಿ ಮೇ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ಮಧ್ಯಾಹ್ನ 12 ರಿಂದ 3 ಗಂಟೆ ವರೆಗಿನ ಶೋ ಉಚಿತವಾಗಿ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ‘ಹಿಂದೂ ಸಹೋದರ, ಸಹೋದರಿಯರು ತಪ್ಪದೇ ಈ ಚಿತ್ರ ನೋಡಬೇಕು’ ಎಂದೂ ಶಾಸಕರು ವಿನಂತಿಸಿಕೊಂಡ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ 

Share this Video
  • FB
  • Linkdin
  • Whatsapp

ವಿಜಯಪುರ(ಮೇ.16): ದೇಶದಾದ್ಯಂತ ಸಂಚಲನ ಮೂಡಿಸಿರುವ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಎಲ್ಲ ಹಿಂದೂಗಳು ಒಟ್ಟಾಗಿ ಕುಳಿತುಕೊಂಡು ವೀಕ್ಷಣೆ ಮಾಡಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು ನಗರದಲ್ಲಿ ವ್ಯವಸ್ಥೆ ಮಾಡಿದ್ದಾರೆ. ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಮೇ 16 ರಿಂದ 18 ರವರೆಗೆ ಮೂರು ದಿನಗಳ ಕಾಲ ಮಧ್ಯಾಹ್ನ 12 ರಿಂದ 3 ಗಂಟೆ ವರೆಗಿನ ಶೋ ಉಚಿತವಾಗಿ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ‘ಹಿಂದೂ ಸಹೋದರ, ಸಹೋದರಿಯರು ತಪ್ಪದೇ ಈ ಚಿತ್ರ ನೋಡಬೇಕು’ ಎಂದೂ ಶಾಸಕರು ವಿನಂತಿಸಿಕೊಂಡಿದ್ದಾರೆ.

ದಿಲ್ಲಿಯಲ್ಲಿ ಸಿದ್ದು, ಬೆಂಗಳೂರಲ್ಲಿ ಡಿಕೆಶಿ, ಸಿಎಂ ಸ್ಥಾನಕ್ಕೆ ಹೆಚ್ಚಾಯ್ತು ಜಟಾಪಟಿ!

Related Video