ಸಿದ್ದರಾಮಯ್ಯ ಮುಂದಿನ ಎಲೆಕ್ಷನ್‌ಗೆ ಆಯ್ದುಕೊಳ್ಳುವ ಕ್ಷೇತ್ರ ಯಾವುದು..?

 ಆ 20 Constituencyಗಳಲ್ಲಿ ಸಿದ್ದರಾಮಯ್ಯ ಆಯ್ಕೆ ಕೋಲಾರನೇನಾ..?ಅಥವಾ ತಮ್ಮ ರಾಜಕೀಯ ಜೀವನದ ಕಟ್ಟ ಕಡೆಯ ಚುನಾವಣೆಯಲ್ಲಿ ಸಿದ್ದು ಮತ್ತೊಮ್ಮೆ ಕ್ಷೇತ್ರ ಬದಲಾವಣೆ ಮಾಡದೇ ಬಾದಾಮಿಯಲ್ಲೇ ಮತ್ತೆ ಸ್ಪರ್ಧಿಸುತ್ತಾರಾ? ಈ ಕುರಿತು ಒಂದು ವರದಿ ಇಲ್ಲಿದೆ.

First Published Jul 19, 2022, 4:10 PM IST | Last Updated Jul 19, 2022, 4:10 PM IST

ಬೆಂಗಳೂರು, (ಜುಲೈ.19): ಮಾಜಿ ಸಿಎಂ ಸಿದ್ದರಾಮಯ್ಯವರಿಗೆ ರಾಜಕೀಯದಲ್ಲಿ ಆಘಾತ ಅನ್ನೋದೇನಾದ್ರು ಇದ್ರೆ, ಅದು ಕಳೆದ ಎಲೆಕ್ಷನ್ನ ಚಾಮುಂಡೇಶ್ವರಿ ಕ್ಷೇತ್ರದ ಸೋಲು. ಈ ಸೋಲು ಮಾಜಿ ಸಿಎಂ ಸಿದ್ದುಗೆ ದೊಡ್ಡ ಆಘಾತ, ಅವರು ಊಹಿಸದೇ ಇದ್ದ ಫಲಿತಾಂಶವನ್ನು ಜನ ಕೊಟ್ಟಿದ್ರು. ಹೀಗಾಗಿ ಸೋಲಿನ ನಂತರ ಸಿದ್ದು ಚಾಮುಂಡೇಶ್ವರಿ ಮೇಲೆ ತುಂಬಾ ಮುನಿಸಿಕೊಂಡಿದ್ದಾರೆ. ತಮ್ಮ ಮುನಿಸಿದೆ ಸಿದ್ದು ಪಕ್ಕಾ ಲೆಕ್ಕಾಚಾರವನ್ನೂ ಇಟ್ಟುಕೊಂಡಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸೋಲು-ಗೆಲುವಿನ ಆಳ ಅಗಲ ಬಿಚ್ಚಿಟ್ಟ ಸಿದ್ದರಾಮಯ್ಯ

ಹೌದು.. ಸಿದ್ದರಾಮಯ್ಯನವರಿಗೆ ಮೈಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರದ ನಾಯಕ ಮತ್ತು ಕಾರ್ಯಕರ್ತರ ಮೇಲೆ ಸಿಕ್ಕಾಪಟ್ಟೆ ಕೋಪವಿದೆ ಅನ್ನೋದಕ್ಕೆ ಇದೊಂದು ಸನ್ನಿವೇಶ ಸಾಕ್ಷಿ ಸಾಕು. ಇದೆಲ್ಲ ನೋಡಿದ್ರೆ ಸಿದ್ದರಾಮಯ್ಯನವರು ಬರಲಿರೋ ಎಲೆಕ್ಷನ್ನಲ್ಲಿ ಚಾಮುಂಡೇಶ್ವರಿಗೆ ಕಾಲಿಡೋದಿಲ್ಲ ಅನ್ನೋದು ಪಕ್ಕಾ. ಹಾಗಿದ್ರೆ ಸಿದ್ದರಾಮಯ್ಯ ಮುಂದಿನ ಎಲೆಕ್ಷನ್‌ಗೆ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ಯಾವುದು ಇರಬಹುದು?