Puneeth Rajkumar James: 'ಜೇಮ್ಸ್ ಜಾಗಕ್ಕೆ ಕಾಶ್ಮೀರ ಫೈಲ್ಸ್ ಹಾಕಿ ಅಂತಿದ್ದಾರೆ.. ಏನಿದು ದೌರ್ಜನ್ಯ?'

* ಜೇಮ್ಸ್ ಪ್ರದರ್ಶನ  ನಿಲ್ಲಿಸಲು ಬಿಜೆಪಿ ಶಾಸರಿಂದ ಒತ್ತಡ?
* ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ ಸಿದ್ದರಾಮಯ್ಯ
* ಪುನೀತ್ ರಾಜ್‍ಕುಮಾರ್ ಒಬ್ಬ ಸಮಾಜಮುಖಿ, ಪ್ರತಿಭಾನ್ವಿಂತ ನಟ
* ಬಿಜೆಪಿ ನಾಯಕರು ಇಂಥ ಕೆಲಸ ಮಾಡುವುದು ದೌರ್ಜನ್ಯ

First Published Mar 22, 2022, 8:21 PM IST | Last Updated Mar 22, 2022, 8:25 PM IST

ಬೆಂಗಳೂರು(ಮಾ. 22)   ಅನೇಕ ಕಡೆಗಳಲ್ಲಿ ಬಿಜೆಪಿ (BJP) ಶಾಸಕರು, ಕಾರ್ಯಕರ್ತರು ಜೇಮ್ಸ್ (James) ಚಿತ್ರ ಪ್ರದರ್ಶನ ನಡೆಯುತ್ತಿರುವ ಸಿನೆಮಾ ಮಂದಿರಕ್ಕೆ ಹೋಗಿ ನೀವು ಜೇಮ್ಸ್ ಚಿತ್ರ ಪ್ರದರ್ಶನ ನಿಲ್ಲಿಸಿ, ಕಾಶ್ಮೀರಿ ಫೈಲ್ಸ್ (The Kashmir Files) ಚಿತ್ರ ಹಾಕಿ ಎಂದು ಒತ್ತಡ ಹೇರಿ ಕೆಲವೆಡೆ ಜೇಮ್ಸ್ ಚಿತ್ರ ಪ್ರದರ್ಶನ ನಿಲ್ಲಿಸಿದ್ದಾರೆ. ಇದೇ ರೀತಿ ಇನ್ನೂ ಹಲವಾರು ಕಡೆ ಒತ್ತಡ ಹಾಕುತ್ತಿದ್ದಾರೆ .  ದೌರ್ಜನ್ಯವಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah)ಹೇಳಿದ್ದಾರೆ.

ಜೇಮ್ಸ್‌ ಚಿತ್ರಕ್ಕೆ ಕಂಟಕವಾಗಿದೆಯಾ ರಾಜಮೌಳಿ 'RRR' ಸಿನಿಮಾ?

ಪುನೀತ್ ರಾಜ್‍ಕುಮಾರ್ (Puneeth Rajkumar) ಒಬ್ಬ ಸಮಾಜಮುಖಿ, ಪ್ರತಿಭಾನ್ವಿಂತ ನಟರಾಗಿದ್ದವರು. ಅವರಿಗೆ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ, ಅವರ ಕೊನೆ ಚಿತ್ರವನ್ನು ವೀಕ್ಷಿಸಬೇಕು ಎಂದು ಅವರ ಎಲ್ಲಾ ಅಭಿಮಾನಿಗಳಿಗೆ ಆಸೆ ಇದೆ. ಹೀಗಾಗಿ ಜೇಮ್ಸ್ ಚಿತ್ರ ಸ್ಥಗಿತಗೊಳಿಸುವ ಬಿಜೆಪಿ ಶಾಸಕರ ಯತ್ನಕ್ಕೆ ನನ್ನ ವಿರೋಧವಿದೆ. ಬಿಜೆಪಿಯವರು ತಮ್ಮನ್ನು ಸಜ್ಜನರು ಎಂದು ಹೇಳಿಕೊಂಡು ಮಾಡುವುದು ಇಂಥಾ ದೌರ್ಜನ್ಯದ ಕೆಲಸ. ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡ್ತಿರುವ ಶಾಸಕರ ಜೊತೆ ನಾನು ಮಾತನಾಡ್ತೇನೆ. ಯಾವೆಲ್ಲಾ ಟಾಕೀಸುಗಳು ಬುಕ್ ಆಗಿವೆ ಅಲ್ಲಿ ಸಿನಿಮಾ ತೋರಿಸಿ ಎಂದು ನಿಸಿಮಾ ನಿರ್ಮಾಪಕರಿಗೆ ಹೇಳಿದ್ದೇನೆ ಎಂದರು.