ಆರ್ ಆರ್ ಆರ್ ಸಿನಿಮಾ ಬಿಡುಗಡೆ ಹಿನ್ನೆಲೆ ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಚಿತ್ರಪ್ರದರ್ಶಕರ ಹಿಂದೇಟು ಹಾಕುತ್ತಿದ್ದಾರೆ ಎಂದು ನಿರ್ದೇಶಕ ಚೇತನ್ ಹೇಳಿದ್ದಾರೆ. ಹಲವು ಚಿತ್ರಮಂದಿರಗಳಿಂದ ಜೇಮ್ಸ್ ಸಿನಿಮಾವನ್ನ ತೆಗೆಯುತ್ತಿದ್ದಾರೆ ಆರೋಪಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಪ್ಪು ಹುಟ್ಟುಹಬ್ಬದ ದಿನ ಬಿಡುಗಡೆಯಾದ ಜೇಮ್ಸ್ ಸಿನಿಮಾ ಈಗಾಗಲೇ 100 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಜೇಮ್ಸ್ ಚಿತ್ರವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಬಂದಿದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ಜೇಮ್ಸ್ ಸಿನಿಮಾಗೆ ಕಂಟಕವಾಗಿದೆ ಎನ್ನಲಾಗುತ್ತಿದೆ.
ಆರ್ ಆರ್ ಆರ್ ಸಿನಿಮಾ ಬಿಡುಗಡೆ ಹಿನ್ನೆಲೆ ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಚಿತ್ರಪ್ರದರ್ಶಕರ ಹಿಂದೇಟು ಹಾಕುತ್ತಿದ್ದಾರೆ ಎಂದು ನಿರ್ದೇಶಕ ಚೇತನ್ ಹೇಳಿದ್ದಾರೆ. ಹಲವು ಚಿತ್ರಮಂದಿರಗಳಿಂದ ಜೇಮ್ಸ್ ಸಿನಿಮಾವನ್ನ ತೆಗೆಯುತ್ತಿದ್ದಾರೆ. ಜೇಮ್ಸ್ ಸಿನಿಮಾ ಎರಡನೇ ವಾರವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆದ್ರೂ ಕೆಲವು ಚಿತ್ರಮಂದಿರಗಳಲ್ಲಿ ಜೇಮ್ಸ್ ಚಿತ್ರವನ್ನು ತೆಗೆಯುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಟಿಸಿರೋ ಕೊನೆಯ ಕಮರ್ಷಿಯಲ್ ಸಿನಿಮಾ ಇದು. ಒಳ್ಳೆಯ ಕಲೆಕ್ಷನ್ ಮಾಡುತ್ತಿದ್ದರು ಸಿನಿಮಾ ತೆಗೆಯುತ್ತಿದ್ದಾರೆ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಆದ್ರೆ ನಮ್ಮ ಚಿತ್ರರಂಗದ ಸಿನಿಮಾ ವಿತರಕರು, ಹಾಗು ಪ್ರದರ್ಶಕರಲ್ಲಿ ಮನವಿ ಮಾಡುತ್ತೇನೆ ಜೇಮ್ಸ್ ಸಿನಿಮಾವನ್ನ ತೆಗೆಯಬೇಡಿ. ಎಲ್ಲರೂ ಪುನೀತ್ ಸರ್ ಕೊನೆ ಸಿನಿಮಾವನ್ನ ನೋಡಲಿ ಎಂದು ನಿರ್ದೇಶಕ ಚೇತನ್ ಕುಮಾರ್ ವಿತರಕರು, ಪ್ರದರ್ಶಕರಿಗೆ ಮನವಿ ಮಾಡಿದ್ದಾರೆ.
ಮೈಸೂರು ವಿವಿ 102ನೇ ಘಟಿಕೋತ್ಸವದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್!
ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಮಾರ್ಚ್ 25ಕ್ಕೆ ರಿಲೀಸ್ ಆಗ್ತಿದೆ. ಕರ್ನಾಟಕದಲ್ಲಿಯೇ ಕನ್ನಡ ಸೇರಿ ಐದಕ್ಕೂ ಅಧಿಕ ಭಾಷೆಯಲ್ಲಿ ತೆರೆ ಕಾಣುತ್ತಿದೆ. ಕರ್ನಾಟಕದಾದ್ಯಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. 300ಕ್ಕೂ ಹೆಚ್ಚಿನ ಚಿತ್ರಮಂದಿರಗಳನ್ನು RRR ಬಾಚಿಕೊಳ್ಳಲಿದೆ. ಇದ್ರಿಂದ ಜೇಮ್ಸ್ ಸಿನಿಮಾಗಳಿರೋ ಥಿಯೇಟರ್ ಗಳು ಆರ್ ಆರ್ ಆರ್ ಸಿನಿಮಾ ಪಾಲಾಗೋ ಸಾಧ್ಯತೆ ಇದೆ. ಹೀಗಾಗಿ ಜೇಮ್ಸ್ ಸಿನಿಮಾ ಇರೋ ಚಿತ್ರಮಂದಿರಗಳಲ್ಲಿ ಬೇರೆ ಸಿನಿಮಾ ಹಾಕಬೇಡಿ ಎಂದು ಅಭಿಮಾನಿಗಳು ಮತ್ತು ನಿರ್ದೇಶಕ ಚೇತನ್ ಕುಮಾರ್ ಮನವಿ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ಚಿಕ್ಕಬಳ್ಳಾಪುರದಲ್ಲಿ ಆರ್ ಆರ್ ಆರ್ ಸಿನಿಮಾದ ಅದ್ದೂರಿ ಪ್ರಿ ರಿಲೀಸ್ ಈವೆಂಟ್ ಹಮ್ಮಿಕೊಳ್ಳಲಾಗಿತ್ತು. ಈವೆಂಟ್ ನಡೆಯುವ ಮೊದಲು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದ ಚಿತ್ರತಂಡ ಬಿಡುಗಡೆ ಬಗ್ಗೆ ಮಾತನಾಡಿತ್ತು. ಈ ಸಿನಿಮಾದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿನಿಮಾತಂಜಡ ಜೇಮ್ಸ್ ಸಿನಿಮಾಗೆ ಯಾವುದೇ ತೊಂದರೆ ಆಗದ ರೀತಿ ಆರ್ ಆರ್ ಆರ್ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಾಗಿ ಬರವಸೆ ನೀಡಿದ್ದರು.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮತ್ತು ಕುಟುಂಬಸ್ಥರಿಂದ ಕಾಲ್ನಡಿಗೆ!
ಆದರೀಗ ಚಿತ್ರಮಂದಿರಗಳಿಂದ ಸಿನಿಮಾ ಎತ್ತಂಗಡಿ ಮಾಡಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದ್ದು, ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.
