Asianet Suvarna News Asianet Suvarna News

'ಸಿದ್ದರಾಮೋತ್ಸವ' ಮಧ್ಯೆ ಪಕ್ಷ ನಿಷ್ಠೆ ಬಗ್ಗೆ ಡಿಕೆಶಿ ಪಾಠ: ಕನಕಪುರ ಬಂಡೆ ಗುಡುಗಿದ್ದು ಯಾರ ಮೇಲೆ?

ದಾವಣಗೆರೆಯಲ್ಲಿ (Davanagere) ಆಗಸ್ಟ್ 3 ರಂದು ಆಯೋಜಿಸಲಾಗಿರುವ ಸಿದ್ದರಾಮೋತ್ಸವ (Siddaramothsava) ಕಾರ್ಯಕ್ರಮದ ಬಗೆಗಿನ ಬಿಜೆಪಿ ಟೀಕೆಗೆ, ಬೇರೆಯವರು ಏನಾದರೂ ಹೇಳಲಿ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ನನಗೂ ಸಿದ್ದರಾಮಯ್ಯ ಆಹ್ವಾನ ಕೊಟ್ಟಿದ್ದಾರೆ. ನಾನೂ ಹೋಗುತ್ತಿದ್ದೇನೆ ಎಂದು ಡಿಕೆಶಿ  ಹೇಳಿದ್ದಾರೆ. 
 
First Published Jul 4, 2022, 12:02 PM IST | Last Updated Jul 4, 2022, 12:15 PM IST

ದಾವಣಗೆರೆಯಲ್ಲಿ (Davanagere) ಆಗಸ್ಟ್ 3 ರಂದು ಆಯೋಜಿಸಲಾಗಿರುವ ಸಿದ್ದರಾಮೋತ್ಸವ (Siddaramothsava) ಕಾರ್ಯಕ್ರಮದ ಬಗೆಗಿನ ಬಿಜೆಪಿ ಟೀಕೆಗೆ, ಬೇರೆಯವರು ಏನಾದರೂ ಹೇಳಲಿ. ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಬಯಸುತ್ತಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ನನಗೂ ಸಿದ್ದರಾಮಯ್ಯ ಆಹ್ವಾನ ಕೊಟ್ಟಿದ್ದಾರೆ. ನಾನೂ ಹೋಗುತ್ತಿದ್ದೇನೆ ಎಂದು ಡಿಕೆಶಿ  ಹೇಳಿದ್ದಾರೆ. 

ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ತಿರುವು, ಉದ್ಧವ್ ಶಾಸಕರ ಅನರ್ಹತೆಗೆ ಶಿಂಧೆ ಬಣ ಮನವಿ!

ರಾಹುಲ್ ಗಾಂಧಿ (Rahul Gandhi) ಹಾಗೂ ಪಕ್ಷದ ವರಿಷ್ಠರು ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂದು ತೀರ್ಮಾನಿಸಿದ್ದಾರೆ. ಹೀಗಾಗಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನೇ ಎದುರಿಸಲಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಡಿ.ಕೆ.ಶಿ ಹೇಳಿದ್ದಾರೆ. 

ಗೌಡರ ಸಾವಿನ ಬಗ್ಗೆ ಮಾತು, ಒಕ್ಕಲಿಗ ಕೋಟೆಯಲ್ಲಿ ಸಂಚಲನ? ರಾಜಣ್ಣ ಹೊತ್ತಿಸಿದ ಬೆಂಕಿ 'ಕೈ'ಗೆ ಕಂಟಕ?

ಇದು ಶಕ್ತಿ ಪ್ರದರ್ಶನ ಅಲ್ಲವೇ ಎಂದು ಕೇಳಿದ ಪ್ರಶ್ನೆಗೆ, ನಮ್ಮ ಪಕ್ಷಕ್ಕೆ ಏನೆಲ್ಲಾ ಅನುಕೂಲವಾಗುತ್ತದೆಯೋ ಅದನ್ನೆಲ್ಲ ಮಾಡೋಣ. ಇನ್ನು ಖರ್ಗೆ ಅವರು ಶಾಸಕರಾಗಿ 50 ವರ್ಷ ಆಗಿದೆ, ಆ ಕಾರ್ಯಕ್ರಮ ಮಾಡಬೇಕು ಎಂದು ಅವರ ಅಭಿಮಾನಿಗಳು ಕೇಳುತ್ತಾರೆ. ಪರಮೇಶ್ವರ್‌ ಅವರ ಅಭಿಮಾನಿಗಳು ಬಂದು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾಡಬೇಕು ಎಂದು ಕೇಳುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಆಸೆ ಇರುತ್ತದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.

Video Top Stories