
ಗೌಡರ ಸಾವಿನ ಬಗ್ಗೆ ಮಾತು, ಒಕ್ಕಲಿಗ ಕೋಟೆಯಲ್ಲಿ ಸಂಚಲನ? ರಾಜಣ್ಣ ಹೊತ್ತಿಸಿದ ಬೆಂಕಿ 'ಕೈ'ಗೆ ಕಂಟಕ?
ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅನ್ನೋ ಮಾತಿದೆ. ಮಾತೇ ಮುತ್ತು, ಮಾತೇ ಮೃತ್ಯು ಅನ್ನೋ ಮಾತೂ ಇದೆ. ರಾಜ್ಯ ಕಾಂಗ್ರೆಸ್ ಪಾಳೆಯಕ್ಕೆ ಮೃತ್ಯುಕೂಪದ ರೂಪದಲ್ಲಿ ಬಂದಪ್ಪಳಿಸಿದೆ ಅಂಥದ್ದೇ ಒಂದು ಮಾತು. ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಆಡಿರೋ ಮಾತು.
ಬೆಂಗಳೂರು, (ಜುಲೈ.03): ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅನ್ನೋ ಮಾತಿದೆ. ಮಾತೇ ಮುತ್ತು, ಮಾತೇ ಮೃತ್ಯು ಅನ್ನೋ ಮಾತೂ ಇದೆ. ರಾಜ್ಯ ಕಾಂಗ್ರೆಸ್ ಪಾಳೆಯಕ್ಕೆ ಮೃತ್ಯುಕೂಪದ ರೂಪದಲ್ಲಿ ಬಂದಪ್ಪಳಿಸಿದೆ ಅಂಥದ್ದೇ ಒಂದು ಮಾತು. ಮಾಜಿ ಪ್ರಧಾನಿ ದೇವೇಗೌಡರ ಸಾವಿನ ಬಗ್ಗೆ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಆಡಿರೋ ಮಾತು.
ಭುಗಿಲೆದ್ದ ಆಕ್ರೋಶ, ತುರ್ತು ಸುದ್ದಿಗೋಷ್ಠಿ ಕರೆದು ದೇವೇಗೌಡ್ರ ಕ್ಷಮೆಯಾಚಿಸಿದ ರಾಜಣ್ಣ
ಆ ಮಾತಿಗೆ ಭುಗಿಲೆದ್ದ ಆಕ್ರೋಶ, ಮಾತಿನ ಸುತ್ತ ಸುತ್ತುತ್ತಿರುವ ರಾಜಕೀಯ ಚದುರಂಗ.. ಆ ಒಂದು ಮಾತು ಕಾಂಗ್ರೆಸ್ ಪಾಲಿಗೆ ಕೆಂಡವಾಗ್ತಿರೋದು ಹೇಗೆ..? ದೇವೇಗೌಡರ ಸಾವಿನ ಬಗ್ಗೆ ಮಾಜಿ ಶಾಸಕ ರಾಜಣ್ಣ ಆಡಿರೋ ಮಾತುಗಳನ್ನು ಸಿದ್ದರಾಮಯ್ಯನವರ ಮೇಲೆ ತಿರುಗಿಸಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಅಷ್ಟಕ್ಕೂ ಸಿದ್ದರಾಮಯ್ಯ ಬಗ್ಗೆ ಎಚ್ಡಿಕೆ ಹೇಳಿದ್ದೇನು..? ಇದಕ್ಕೆ ಸಿದ್ದು ಕೊಟ್ಟ ಉತ್ತರ ಏನು..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಎಪಿಸೋಡ್.