ಕ್ಯಾಬಿನೆಟ್‌ ಸಸ್ಪೆನ್ಸ್‌: ಶೀಘ್ರವೇ ಬಿಎಸ್‌ವೈ ಸಂಪುಟಕ್ಕೆ ಮೇಜರ್‌ ಸರ್ಜರಿ..?

ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಲಿದ ಹಲವು ಮಂತ್ರಿಗಳು| ನಡ್ಡಾ ಭೇಟಿಯಾಗಲಿರುವ ಲಕ್ಷ್ಮಣ ಸವದಿ, ಆರ್‌. ಅಶೋಕ್‌| ನಾಳೆ ಸಚಿವ ಸಂಪುಟ ಸಭೆ ಕರೆದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ| 
 

Share this Video
  • FB
  • Linkdin
  • Whatsapp

ಬೆಂಗಳೂರು(ನ.26): ಸಚಿವ ಸಂಪುಟ ವಿಸ್ತರಣೆ ಸಂಬಂಧ ಹಲವು ಮಂತ್ರಿಗಳು ಸಚಿವರು ಇಂದು(ಗುರುವಾರ) ರಾಷ್ಟ್ರ ರಾಜಧಾನಿ ದೆಹಲಿ ತೆರಳಲಿದ್ದಾರೆ. ಸಿ.ಟಿ. ರವಿ ಕಚೇರಿ ಪೂಜೆ ನೆಪದಲ್ಲಿ ದೆಹಲಿಗೆ ಭೇಟಿ ನೀಡಲಿದ್ದಾರೆ ಹಲವು ಸಚಿವರು. ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಆರ್‌. ಅಶೋಕ್‌ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿ ಮಾಡಲಿದ್ದಾರೆ.

ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಲು ಬಿಜೆಪಿ ಶಾಸಕನಿಂದಲೇ ವಿರೋಧ..!

ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ನಾಳೆ(ಶನಿವಾರ) ಸಚಿವ ಸಂಪುಟ ಸಭೆಯನ್ನ ಕರೆದಿದ್ದಾರೆ. ಹೀಗಾಗಿ ಸಚಿವ ಸಂಪುಟ ಸಭೆಗೂ ಮುನ್ನ ನಡ್ಡಾ ಅವರನ್ನ ಹಲವು ಮಂತ್ರಿಗಳು ಭೇಟಿಯಾಗುತ್ತಿರುವುದು ಮಾತ್ರ ಭಾರೀ ಮಹತ್ವ ಪಡೆದುಕೊಂಡಿದೆ. 

Related Video