Asianet Suvarna News Asianet Suvarna News

ಸೋತರೂ ಗೆದ್ದ ಅನರ್ಹ ಶಾಸಕರು: ಚುನಾವಣೆಗೆ ಸ್ಪರ್ಧೆಗೆ ಅಸ್ತು ಎಂದ ಸುಪ್ರೀಂ

Nov 13, 2019, 11:27 AM IST

ನವದೆಹಲಿ [ನ.13] : ರಾಜ್ಯ 17 ಅನರ್ಹ ಶಾಸಕರ ತೀರ್ಪು ಕೊನೆಗೂ ಸುಪ್ರೀಂ ಕೋರ್ಟಿಂದ ಪ್ರಕಟವಾಗಿದೆ. ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೆ ಇದೇ ವೇಳೆ ರಿಲೀಫ್ ಕೂಡ ನೀಡಿದೆ. ರಾಜ್ಯದಲ್ಲಿ ಶೀಘ್ರ ನಡೆಯುತ್ತಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಹೇಳಿದೆ. 

17 ಶಾಸಕರ ಅನರ್ಹತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ : ಕೊಂಚ ರಿಲೀಫ್...

ಇದರಿಂದ ಇತ್ತ ಅಂದಿನ ಸ್ಪೀಕರ್ ಆಗಿ ಆದೇಶ ನೀಡಿದ್ದ ರಮೇಶ್ ಕುಮಾರ್ ಅವರ ಆದೇಶಕ್ಕೂ ಬೆಲೆ ಸಿಕ್ಕಂತಾಗಿದ್ದು, ಅನರ್ಹತೆ ಫಿಕ್ಸ್ ಆಗಿದೆ. ಆದರೆ ಮತ್ತೊಮ್ಮೆ ಚುನಾವಣೆ ಸ್ಪರ್ಧೆ ಮಾಡಿ ಗೆಲ್ಲುವ ಮೂಲಕ ಶಾಸಕ ಸ್ಥಾನ ಪಡೆದುಕೊಳ್ಳಬಹುದಾಗಿದೆ. ಆದರೆ ಸದ್ಯಕ್ಕೆ ಇವರಿಗೆ ಮಂತ್ರಿ ಸ್ಥಾನದ ಭಾಗ್ಯ ಮಾತ್ರ ಇಲ್ಲವಾಗಿದೆ.

ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Video Top Stories