ಮೈಸೂರು ಪ್ರವಾಸ ವಂಚಿತ ಶಾಸಕರನ್ನು ದುಬೈಗೆ ಕರೆದೊಯ್ಯುತ್ತಾರಾ ಸತೀಶ್ ಜಾರಕಿಹೊಳಿ..?
ರಾಜ್ಯ ಕಾಂಗ್ರೆಸ್‌ನಲ್ಲಿ ಬೂದಿಮುಚ್ಚಿದ ಕೆಂಡದಂತಿದೆ ಬೆಳಗಾವಿ ಫೈಟ್
ಬೆಳಗಾವಿ ದಂಗಲ್‌ನಿಂದ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಕಳವಳ
ಸಿದ್ದರಾಮಯ್ಯ, ಡಿಕೆಶಿ ಬಳಿಕ ನಾಯಕ ನಾನೇ ಎಂಬ ಸಂದೇಶ ರವಾನೆ
ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಸತೀಶ್ ಜಾರಕಿಹೊಳಿ(Satish Jarakiholi) ಆಂತರಿಕ ಸಮರ ತಣ್ಣಗಾಗದಂತೆ ಕಾಣುತ್ತಿದೆ. ಮೈಸೂರು ಪ್ರವಾಸ ಕೊಕ್ಕೆ ಹಾಕಿದ ಡಿಕೆಶಿಗೆ(DK shivakumar) ತಿರುಗೇಟು ಕೊಡಲು ಸಾಹುಕಾರ್ ತಂಡ ಸಜ್ಜಾಗಿದೆ. ಮೈಸೂರು(Mysore) ಪ್ರವಾಸ ವಂಚಿತ ಶಾಸಕರನ್ನು ಸತೀಶ್ ಜಾರಕಿಹೊಳಿ ದುಬೈಗೆ ಕರೆದೊಯ್ಯುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ದುಬೈ ಪ್ರವಾಸದ(Dubai Trip) ಬಗ್ಗೆ ಸತೀಶ್ ಜಾರಕಿಹೊಳಿ ಆಪ್ತ ಶಾಸಕ ಆಸೀಫ್ ಸೇಠ್ ಸುಳಿವು ಕೊಟ್ಟಿದ್ದಾರೆ. ಆಸೀಫ್ ಸೇಠ್ ಹೇಳಿಕೆಯನ್ನು ಸತೀಶ್ ಜಾರಕಿಹೊಳಿ ಖಚಿತಪಡಿಸಿದ್ದಾರೆ. ಮಾಧ್ಯಮಗಳಲ್ಲಿ ವಿವಾದ ಸೃಷ್ಟಿ ಆಗುತ್ತೆಂದು ತಕ್ಷಣವೇ ಸತೀಶ್ ಜಾರಕಿಹೊಳಿ ಅಲರ್ಟ್ ಆಗಿದ್ದು, ಮಾಜಿ ಶಾಸಕರನ್ನು ದುಬೈಗೆ ಕರೆದೊಯ್ಯುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಪಕ್ಷದೊಳಗೆ ಮೂರನೇ ಬಣ ಸೃಷ್ಟಿಗೆ ಹಾತೊರೆಯುತ್ತಿರುವ ಸತೀಶ್ ಜಾರಕಿಹೊಳಿ, ಸಮಾನ ಮನಸ್ಕ ಶಾಸಕರನ್ನು ಒಳಗೊಂಡಂತೆ ಮೂರನೇ ಬಣ ಸೃಷ್ಟಿಗೆ ಸತೀಶ್ ಚಿಂತನೆ ನಡೆಸಿದಂತೆ ಕಾಣುತ್ತಿದೆ.
ಇದನ್ನೂ ವೀಕ್ಷಿಸಿ: ಎಚ್‌ಡಿಕೆ ವಿರುದ್ಧ ತೊಡೆ ತಟ್ಟಿದ ಡಿಕೆಶಿ ಶಪಥದ ಹಿಂದಿದೆ ಭಾರೀ ರಾಜಕೀಯ ಲೆಕ್ಕಾಚಾರ!