Asianet Suvarna News Asianet Suvarna News

Modi campaign: ಮೈಸೂರು ಭಾಗದಲ್ಲಿ ದೋಸ್ತಿಗೆ ಸಿಗುತ್ತಾ ಮೈತ್ರಿ ಬಲ? ಕರಾವಳಿಯಲ್ಲಿ ಜಾತಿ ರಾಜಕಾರಣಕ್ಕೆ ಬಿತ್ತಾ ಫುಲ್ ಸ್ಟಾಪ್‌?

ಮೋದಿ-ಗೌಡರ ಸಮಾಗಮ ರಾಜಕೀಯ ಇತಿಹಾಸದಲ್ಲಿ ಮೈಲುಗಲ್ಲು
ಜಾತಿ-ಮತ ಬಿಟ್ಟು ದೇಶಕ್ಕಾಗಿ ಮೋದಿಗೆ ಮತ ನೀಡಿ ಎಂಬ ಸಂದೇಶ
ಪ್ರಧಾನಿ ಮೋದಿ ಗುಣಗಾನ ಮಾಡಿದ ಮಾಜಿ ಪ್ರಧಾನಿ ದೇವೇಗೌಡರು
 

ಲೋಕಸಭಾ ಚುನಾವಣೆ ಹಿನ್ನೆಲೆ ಮೈಸೂರು, ಮಂಗಳೂರಲ್ಲಿ ಪ್ರಧಾನಿ ಮೋದಿ ಪ್ರಚಾರದ (Modi campaign) ಅಬ್ಬರ ಜೋರಾಗಿದ್ದು, ಮೋದಿ ಆಗಮನದಿಂದ ಎರಡೂ ಕಡೆ ವಾತಾವರಣ ಬದಲಾದಂತೆ ಕಾಣುತ್ತಿದೆ. ಅದರಲ್ಲೂ ಮೈಸೂರು(Mysore) ಭಾಗದಲ್ಲಿ ದೋಸ್ತಿಗೆ ಮೈತ್ರಿ ಬಲ ಹೆಚ್ಚಾಗಲಿದೆ ಎನ್ನಲಾಗಿದೆ. ಈ ನಡುವೆ ಮೋದಿ(Narendra Modi) ಹಾಗೂ ಮಾಜಿ ಪ್ರಧಾನಿ ದೇವೇಗೌಡರ(Devegowda) ಸಮಾವೇಶಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ದೋಸ್ತಿ ಸಮಾವೇಶಕ್ಕೆ ಭಾರೀ ಜನಸಾಗರವೇ ಹರಿದುಬಂದಿದ್ದು, ಜಾತಿ ಲೆಕ್ಕಾಚಾರದ ಕ್ಷೇತ್ರದಲ್ಲಿ ಇದೀಗ ಹಿಂದುತ್ವದ ಅಲೆ ಹೆಚ್ಚಾಗಿದೆ. ಹಾಗೂ ಜಾತಿ ಹೆಸರಲ್ಲಿ ಛಿದ್ರವಾಗಿದ್ದ ಮತಗಳು ಹಿಂದುತ್ವದ ಹೆಸರಲ್ಲಿ ಒಗ್ಗಟ್ಟಾಗಲಿವೆ ಎಂದು ಲೆಕ್ಕಾಚಾರ ಹಾಕಲಾತ್ತಿದೆ. ಇದರ ನಡುವೆ ಜಾತಿ-ಮತ ಬಿಟ್ಟು ದೇಶಕ್ಕಾಗಿ ಹಾಗೂ ಮೋದಿಗೆ ಮತ ನೀಡಿ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಅಲ್ಲದೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡಿದ್ದಾರೆ. ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಮೋದಿ ಅವರ ಮಣ್ಣಿನ ಮಗನ ಸಾಧನೆ ಶ್ಲಾಘಿಸಿದರು. ಈ ವೇಳೆ ಇಬ್ಬರೂ ಸೇರಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಕಿಡಿಕಾರಿದರು.

ಇದನ್ನೂ ವೀಕ್ಷಿಸಿ:  Rahul Gandhi: ಏ. 17ರಂದು ರಾಜ್ಯಕ್ಕೆ ರಾಹುಲ್ ಗಾಂಧಿ: ಕೋಲಾರದಲ್ಲಿ ಬೃಹತ್ ಸಮಾವೇಶ, ಒಗ್ಗಟ್ಟು ಪ್ರದರ್ಶನಕ್ಕೆ ತಯಾರಿ

Video Top Stories