ಚಿಂತನ ಸಭೆಯಲ್ಲಿ ಹಿರಿಯ ನಾಯಕರು ಗರಂ: ಭಾರೀ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಾ ಬಿಜೆಪಿ?

BJP Chintana Manthana Shibira Bengaluru: ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿರುವ ಖಾಸಗಿ ಹೊಟೆಲವೊಂದರಲ್ಲಿ ಬಿಜೆಪಿ ಚಿಂತನ ಮಂಥನ  ಆಯೋಜಿಸಲಾಗಿತ್ತು

First Published Jul 17, 2022, 7:45 PM IST | Last Updated Jul 17, 2022, 7:46 PM IST

ಬೆಂಗಳೂರು (ಜು. 17): ಕರ್ನಾಟಕದಲ್ಲಿ 2023ರ ಚುನಾವಣೆಗೆ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ. ಕಾಂಗ್ರೆಸ್ (KPCC) ಸಾಲು ಸಾಲು ಪ್ರತಿಭಟನೆಗಳನ್ನ ಮಾಡಿಕೊಂಡು ಮುಂದಿನ ಬಾರಿ ಅಧಿಕಾರಕ್ಕೆ ಬರುವ ಆಲೋಚನೆಯಲ್ಲಿ ಇದ್ದರೆ ಇನ್ನೊಂದು ಕಡೆಯಲ್ಲಿ ಜನತಾದಳ (JDS) ಮಿಷನ್ 123 ಟಾರ್ಗೆಟ್ ಹಾಕಿಕೊಂಡು ಮತ್ತೆ ಕರ್ನಾಟಕವನ್ನ ಆಳುವ ಆಲೋಚನೆಯಲ್ಲಿದೆ. ಬಿಜೆಪಿ (BJP) ಕೂಡ ತಯಾರಿಯಲ್ಲಿ ಹಿಂದೆ ಬಿದ್ದಿಲ್ಲಾ. ಪಕ್ಷದಲ್ಲಿ ಮೀಟಿಂಗ್​ಗಳನ್ನ ಮಾಡಿಕೊಂಡು ಇರುವ ಅಧಿಕಾರವನ್ನ ಉಳಿಸಿಕೊಳ್ಳೋಕೆ ಪ್ಲ್ಯಾನ್‌ ಮಾಡುತ್ತಿದೆ. 

ಕರ್ನಾಟಕದಲ್ಲಿ ಮುಂದಿನ ವರ್ಷ ಅಂದ್ರೆ 2023ರಲ್ಲಿ ಚುನಾವಣಾ ಸಮರ (Assembly Election 2023) ಕಾವು ಜೋರಾಗಲಿದೆ. ಅದರ ಸೂಚನೆ ಈಗಲೇ ಸಿಗೋಕೆ ಶುರುವಾಗಿದೆ. ಎಲ್ಲಾ ಪಕ್ಷಗಳೂ ಅವುಗಳ ತಯಾರಿಯಲ್ಲಿ ನಿರತವಾಗಿವೆ. ಬಿಜೆಪಿಯಲ್ಲಿ ಮುಂದಿನ ಚುನಾವಣೆ ತಯಾರಿಗೆ ಈಗಿನಿಂದಲೇ ಕಾರ್ಯತಂತ್ರ ಶುರುವಾಗಿದೆ. ಅದರ ಪೂರ್ವಭಾವಿಯಾಗಿ ಚಿಂತನ ಸಭೆಯನ್ನ ಬಿಜೆಪಿ ಮಾಡಿಕೊಂಡಿದೆ.

ಇದನ್ನೂ ನೋಡಿ: 2023 ರ ಚುನಾವಣೆಗೆ ಜೆಡಿಎಸ್‌ ಭರ್ಜರಿ ಸಿದ್ಧತೆ: ಆನೇಕಲ್‌ ತಾಲೂಕಿನಲ್ಲಿ ದೂರುಡಬ್ಬಿ!

ಇಷ್ಟು ದಿನಗಳ ಕಾಲ ಕರ್ನಾಟಕ ಬಿಜೆಪಿಯ ನಡೆ ನುಡಿ ನೋಡಿದ ಹಿರಿಯರು ಕಿರಿಯರಿಗೆ ಕ್ಲಾಸ್ ತಗೊಂಡಿದ್ದಾರೆ. ಮುಂದಿನ ಬಾರಿ ಗೆಲ್ಲೋಕೆ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲು ಬಿಜೆಪಿ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮುದಾಯಗಳ ಮತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ.

ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿರುವ ಖಾಸಗಿ ಹೊಟೆಲವೊಂದರಲ್ಲಿ ಕೇಸರಿ ಕಲಿಗಳು ಸೇರಿದ್ದರು. ಬಿಜೆಪಿ ಚಿಂತನ ಮಂಥನ ಸಭೆಯಲ್ಲಿ ಅನೇಕ ಚರ್ಚೆಗಳು ನಡೆದವು. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮಾಡಬೇಕಾದ ಕಾರ್ಯತಂತ್ರಗಳ ಕುರಿತು ವಿವಿಧ ಆಯಾಮಗಳಲ್ಲಿ ಸುದೀರ್ಘ ಚರ್ಚೆಯಾಗಿದ್ದು, ಪ್ರಸ್ತುತ ಸರ್ಕಾರದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅಭಿಪ್ರಾಯ ಹಾಗೂ ಮತ್ತೆ ಅಧಿಕಾರಕ್ಕೆ ಬರಲು ಇರುವ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ