ಭಗತ್‌ ಸಿಂಗ್‌ ಹೆಸರು ಹೇಳಿಕೊಂಡು ಬಂದವರನ್ನೇ ಜೈಲಿಗೆ ಹಾಕ್ತಿರಾ?: ಎಂ.ಬಿ.ಪಾಟೀಲ್‌ಗೆ ಸೂಲಿಬೆಲೆ ತಿರುಗೇಟು

ವಿಜಯಪುರದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಸಚಿವ ಎಂ.ಬಿ. ಪಾಟೀಲ್‌ಗೆ ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ.
 

Share this Video
  • FB
  • Linkdin
  • Whatsapp

ವಿಜಯಪುರ: ಚಕ್ರವರ್ತಿ ಸೂಲಿಬೆಲೆ ಹಾಗೂ ಎಂ.ಬಿ. ಪಾಟೀಲ್‌ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಭಗತ್‌ ಸಿಂಗ್‌ ಹೆಸರು ಹೇಳಿಕೊಂಡು ಬಂದವರನ್ನೇ ಜೈಲಿಗೆ ಹಾಕ್ತಿರಾ ?. ಅಯ್ಯೋ ಪುಣಾತ್ಮ ನಾನು ಶಿವಾಜಿಯ ವಂಶಸ್ಥ, ನಾನು ರಾಣಾ ಪ್ರತಾಪರ ವಂಶಸ್ಥ, ನಾನು ಸಾವರ್ಕರ್ ವಂಶಸ್ಥ ಎಂದು ಹೇಳುವ ಮೂಲಕ ಏಕವಚನದಲ್ಲೇ ಸೂಲಿಬೆಲೆ ಎಂ.ಬಿ. ಪಾಟೀಲ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಂ.ಬಿ. ಪಾಟೀಲ್ ವಿರುದ್ಧ ಅವರ ಕ್ಷೇತ್ರದಲ್ಲೇ ನಿಂತು ಸೂಲಿಬೆಲೆ ತಿರುಗೇಟು ನೀಡಿದ್ದಾರೆ. ಈ ಹಿಂದೆ ಪಠ್ಯ ಪುಸ್ತಕ ಮರು ಪರಿಷ್ಕರಣೆ ಚರ್ಚೆ ಸಮಯದಲ್ಲಿ ಚಕ್ರವರ್ತಿ ಸೂಲಿಬೆಲೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ತಿರುಗೇಟು ನೀಡಿದ್ದಾರೆ.

ಇದನ್ನೂ ವೀಕ್ಷಿಸಿ: ಭಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ: ಅನ್ಯ ಕೋಮಿನ ಯುವಕರಿಂದ ದಾಳಿ, ಓರ್ವನಿಗೆ ಚಾಕು ಇರಿತ

Related Video