Asianet Suvarna News Asianet Suvarna News

ಸರ್ಕಾರಿ ಕಾರ್ಯಕ್ರಮದಲ್ಲಿ ಈಶ್ವರಪ್ಪ ಪುತ್ರನ ಫೋಟೋ: ಪರಿಷತ್ ಸದಸ್ಯರು ಗರಂ

ಶಿವಮೊಗ್ಗದಲ್ಲಿ ಬಿಜೆಪಿ ನಾಯಕರ ನಡುವೆ ಮಸುಕಿನ ಗುದ್ದಾಟ ನಡೆದಿದ್ದು, ಕೆ.ಎಸ್ ಈಶ್ವರಪ್ಪ ಪುತ್ರನ  ರಾಜಕೀಯ ವಿರುದ್ಧ ವಿಧಾನ ಪರಿಷತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 

ಶಿವಮೊಗ್ಗ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮಗನ ರಾಜಕೀಯಕ್ಕೆ ಕೆ.ಎಸ್ ಈಶ್ವರಪ್ಪ ಮುನ್ನುಡಿ ಬರೆದಿದ್ದು, ಕಾರ್ಮಿಕರಿಗೆ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಈಶ್ವರಪ್ಪ ಪುತ್ರ ಕಾಂತೇಶ್‌ ಫೋಟೋ ಹಾಕಲಾಗಿದೆ. ಹೀಗಾಗಿ ಕಾಂತೇಶ್ ರಾಜಕೀಯ ವಿರುದ್ಧ ವಿಧಾನ ಪರಿಷತ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ಫೋಟೊ ಹಾಕಿದ್ದಕ್ಕೆ ಆಯನೂರು ಮಂಜುನಾಥ್‌, ರುದ್ರೇಗೌಡ ಗರಂ ಆಗಿದ್ದು, ನಮ್ಮನ್ನ ಅವಮಾನ ಗೊಳಿಸಿದರೆ ಸುಮ್ಮನೆ  ಕೂರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.