ಬಿಜೆಪಿ ಅವಧಿಯಲ್ಲಿ ಪರಿಷ್ಕೃತವಾದ ಪಠ್ಯಕ್ಕೆ ಕೊಕ್‌: 6-10ನೇ ತರಗತಿ ಪಠ್ಯಗಳಲ್ಲಿ ತಿದ್ದುಪಡಿ, ಏನೇನು ಬದಲಾವಣೆ ಆಗಿದೆ ?

ಬಿಜೆಪಿ ಅವಧಿಯಲ್ಲಿ ಪರಿಷ್ಕೃತವಾದ ಪಠ್ಯಕ್ಕೆ ಕಾಂಗ್ರೆಸ್‌ ತಿದ್ದುಪಡಿ ಮಾಡಿ, ಪ್ರತಿಗಳನ್ನು ಬಿಇಒ, ಡಿಡಿಪಿಐಗೆ ರವಾನೆ ಮಾಡಿದೆ.
 

First Published Jul 2, 2023, 9:30 AM IST | Last Updated Jul 2, 2023, 9:30 AM IST

ಬಿಜೆಪಿ ಅವಧಿಯಲ್ಲಿ ಪರಿಷ್ಕೃತವಾದ ಪಠ್ಯಕ್ಕೆ ಕಾಂಗ್ರೆಸ್‌ ತಿದ್ದುಪಡಿ ಮಾಡಿದೆ. ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಸಂಘ ಆರರಿಂದ ಹತ್ತನೇ ತರಗತಿವರೆಗಿನ ಪಠ್ಯದಲ್ಲಿ ತಿದ್ದುಪಡಿ ಮಾಡಿದೆ. ತಿದ್ದುಪಡಿ ಮಾಡಿದ ಪ್ರತಿಗಳನ್ನು ಬಿಇಒ, ಡಿಡಿಪಿಐಗೆ ರವಾನೆ ಮಾಡಲಾಗಿದೆ.ಮುದ್ರಣಕ್ಕೂ ಮುನ್ನ ಬಿಇಒ, ಡಿಡಿಪಿಐಗೆ ತಿದ್ದೋಲೆ ಕಳುಹಿಸಲಾಗಿದೆ. ಬಳಿಕ ಸಪ್ಲಿಮೆಂಟರಿ ಪುಸ್ತಕ ಮುದ್ರಣಕ್ಕೆ ಸಿದ್ದತೆ ನಡೆಸಲಾಗಿದೆ. 10ನೇ ತರಗತಿ ಕನ್ನಡದಲ್ಲಿ ಸೂಲಿಬೆಲೆ ಪಠ್ಯಕ್ಕೆ ಕೊಕ್‌ ಕೊಡಲಾಗಿದೆ. ಇಲ್ಲಿ ನಿಜವಾದ ಆದರ್ಶ ಪುರುಷ ಯಾರಾಗಬೇಕು ಪಾಠ ಸೇರಿಸಲಾಗಿದೆ. ಹೆಡಗೇವಾರ್‌ ಪಠ್ಯದ ಬದಲು ಸುಕುಮಾರಸ್ವಾಮಿ ಕಥೆ ಸೇರ್ಪಡೆ ಮಾಡಲಾಗಿದೆ. ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠದ ಬದಲು ಯುದ್ಧ ಸೇರಿಸಲಾಗಿದೆ. 

ಇದನ್ನೂ ವೀಕ್ಷಿಸಿ: Today Horoscope: ಈ ದಿನದ ರಾಶಿ ಭವಿಷ್ಯ ಹೀಗಿದ್ದು, ಇಂದು ಸೂರ್ಯ, ಅಂಬಿಕಾ ಆರಾಧನೆ ಮಾಡಿ