ಸಿಎಂ ಹುಕುಂ.. ಡಿಸಿಎಂ ಡಿಶುಂ ಡಿಶುಂ.. ಕಾಂಗ್ರೆಸ್‌ನಲ್ಲಿ ಏನಾಗ್ತಿದೆ..?
ಕೈ ಕೋಟೆಯಲ್ಲಿ ಬಣ ಯುದ್ಧ..ಬಲ ಯುದ್ಧ..!
3 ಡಿಸಿಎಂ ಆಯ್ತು.. ಈಗ 6 ಡಿಸಿಎಂ ಕಿಚ್ಚು..!
ಡಿಸಿಎಂ ಡಿಕೆಶಿ ಸಿಎಂ ಆಗ್ಬೇಕು ಎಂದ ಕೈ ಶಾಸಕ..!
ಸಿದ್ದರಾಮಯ್ಯ ಸರ್ಕಾರಕ್ಕೆ ಇನ್ನೂ ಮೂವರು ಡಿಸಿಎಂಗಳು ಬೇಕು ಅಂದ್ರು ಸಚಿವ ಕೆ.ಎನ್ ರಾಜಣ್ಣ, ಮೂರೇಕೆ ಆರು ಡಿಸಿಎಂಗಳಿರಲಿ ಅಂದ್ರು ರೆಬೆಲ್ ರಾಯರೆಡ್ಡಿ. ಡಿಕೆಶಿ ಮುಖ್ಯಮಂತ್ರಿಯಾಗ್ಲಿ ಅಂದ್ರು ಡಿಕೆ ಆಪ್ತ ಶಾಸಕ. ಕಾಂಗ್ರೆಸ್‌ನಲ್ಲಿ(Congress) ಜೋರಾಯ್ತು ಬಣ ರಾಜಕೀಯ. ಸಿದ್ದರಾಮಯ್ಯ(Siddaramaiah) ಬಣದ ವಿರುದ್ಧ ಸಿಡಿದೆದ್ದ ಡಿಕೆ ಟೀಮ್. ಅಧಿಕಾರದಲ್ಲಿರ್ಲಿ, ಇಲ್ದೇ ಇರ್ಲಿ.. ಕಾಂಗ್ರೆಸ್‌ನಲ್ಲಿ ಒಂದು ವಿಷ್ಯ ತುಂಬಾ ಕಾಮನ್. ಅದೇ ಬಣಯುದ್ಧ, ಅಂತರ್ಯುದ್ಧ. ಬಣ ರಾಜಕಾರಣಕ್ಕೂ ಕಾಂಗ್ರೆಸ್‌ಗೂ ಬಿಡದ ನಂಟು. ಕೈ ಪಾಳೆಯದಲ್ಲಿ ಬಣ ಬಡಿದಾಟ ಶುರುವಾಗೋಕೆ ಒಂದು ಸಣ್ಣ ಕಿಡಿ ಸಾಕು. ಅಂಥದ್ದೇ ಒಂದು ಕಿಡಿ ಹೊತ್ತಿಕೊಂಡದ್ದೇ ತಡ.. ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ತಿಕ್ಕಾಟ ಶುರುವಾಗಿದೆ. ಅದು ಎಲ್ಲಿಗೆ ಬಂದು ನಿಂತಿದೆ ಗೊತ್ತಾ ವೀಕ್ಷಕರೇ.. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪಟ್ಟದಲ್ಲಿ ಕೂತಿರೋವಾಗ್ಲೇ, ಡಿಕೆ ಶಿವಕುಮಾರ್(DK Shivakumar) ಸಿಎಂ ಆಗ್ಲೇಬೇಕು ಅಂತ ಸ್ವತಃ ಕಾಂಗ್ರೆಸ್ ಶಾಸಕರೊಬ್ಬರು ಹಕ್ಕೊತ್ತಾಯ ಮಾಡೋವರೆಗೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಎಂ ಆಗ್ಬೇಕು ಅಂದಿರೋರು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್(MLA Shivaganga Basavaraj). ಕೆ.ಎನ್ ರಾಜಣ್ಣನವರ ಈ ವೈಯಕ್ತಿಕ ಅಭಿಪ್ರಾಯವೇ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಕ್ಕೆ ನಾಂದಿ ಹಾಡಿರೋದು. ಸಿದ್ದರಾಮಯ್ಯ ಬಣದವರು ಸ್ಫೋಟಿಸಿದ ಈ ಡಿಸಿಎಂ (DCM)ಬಾಂಬ್, ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಠಿಸಿ ಬಿಟ್ಟಿದೆ.
ಇದನ್ನೂ ವೀಕ್ಷಿಸಿ: ಹಾಲಾಶ್ರೀ ಮೇಲೆ ಮತ್ತೊಂದು ಕೋಟಿ ಆರೋಪ..! ಮೂರುವರೆ ಕೋಟಿಯಲ್ಲಿ ಏನೇನು ಮಾಡಿದ್ಲು ಚೈತ್ರಾ..?