ಕಾಂಗ್ರೆಸ್ ಆಕ್ರೋಶದ ಬೆನ್ನಲ್ಲೇ ಜಮೀರ್ ಟ್ವೀಟ್ ಡಿಲೀಟ್, ಅನ್ನ ಭಾಗ್ಯ ಯೋಜನೆಯಲ್ಲಿ ಟ್ವಿಸ್ಟ್!

ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ, ರಾಜ್ಯಪಾಲರಿಗೆ ಬಿಜೆಪಿ ದೂರು ನೀಡಿದೆ. ಇತ್ತ ಹೊಂದಾಣಿಕೆ ರಾಜಕೀಯ ಆರೋಪದ ಬೆನ್ನಲ್ಲೇ ಹೊಸ ಬಾಂಬ್ ಬಿದ್ದಿದೆ.  ಬೊಮ್ಮಾಯಿ-ಶ್ಯಾಮನೂರು ರಹಸ್ಯ ಮಾತುಕತೆ ಫೋಟೋಗಳು ಬಹಿರಂಗವಾಗಿದೆ. ಹೊಂದಾಣಿಕೆ ರಾಜಕೀಯ ಮಾಡಿದರೆ ಹೆಸರು ಹೇಳಿ, ಪ್ರತಾಪ್ ಸಿಂಹಗೆ ಸಿದ್ದು ಸವಾಲು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ಎಂದು ಜಮೀರ್ ಅಹಮ್ಮದ್ ಖಾನ್ ಮಾಡಿರುವ ಟ್ವೀಟ್ ಇದೀಗ ಭಾರಿ ರಂಪಾಟ ಸೃಷ್ಟಿಸಿದೆ. ಜಮೀರ್ ಟ್ವೀಟ್‌ ಫೋಟೋದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲ ಕಾಣಿಸಿಕೊಂಡಿದ್ದಾರೆ. ಇದು ವಿವಾದವಾಗಿದೆ. ಇತ್ತ ರಣದೀಪ್ ಸುರ್ಜೆವಾಲ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಜಮೀರ್ ಅಹಮ್ಮದ್ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ 10 ಕೆಜಿ ಉಚಿತ ಅಕ್ಕಿ ಯೋಜನೆಯಲ್ಲಿ ಟ್ವಿಸ್ಟ್ ಎದುರಾಗಿದೆ. ಅಕ್ಕಿ ನೀಡುವುದಾಗಿ ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ ಇದೀಗ ಆಗಲ್ಲ ಎಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಯೋಜನೆ ವಿಳಂಬವಾಗುವ ಸಾಧ್ಯತೆ ಇದೆ.ಜನರಿಗೆ ಅನ್ನ ಭಾಗ್ಯ ನೀಡಲು ಕಾಂಗ್ರೆಸ್ ಮೀನಾಮೇಶ ಎಣಿಸುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಇದೀಗ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ ಅಕ್ಕಿ ಸಿಗದಿದ್ದರೆ ಅದರ ದುಡ್ಡನ್ನು ಜನರ ಖಾತೆಗೆ ನೀಡಿ ಎಂದು ಬಿಜೆಪಿ ಟೀಕಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video