ರಾಜ್ಯಸಭಾ ಚುನಾವಣೆ: ದೇವೇಗೌಡರ ‘ಖರ್ಗೆ ಅಸ್ತ್ರ’ ವಿಫಲಗೊಳಿಸಿದ್ಹೇಗೆ ಸಿದ್ದು-ಡಿಕೆಶಿ.?
ರಾಜ್ಯಸಭೆ ಚುನಾವಣೆಯಿಂದ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯನ್ನು ಹಿಂಪಡೆದರು ಜೆಡಿಎಸ್‌ನ ಕುಪೇಂದ್ರರೆಡ್ಡಿ ಅವರಿಗೆ ಬೆಂಬಲಿಸಲು ಎಚ್.ಡಿ. ದೇವೇಗೌಡ ಅವರು ಬಳಸಿದ್ದ ಮಲ್ಲಿಕಾರ್ಜುನ ಖರ್ಗೆ ಅಸ್ತ್ರ ವಿಫಲವಾಗಿದೆ.
ಬೆಂಗಳೂರು (ಜೂ.04): ರಾಜ್ಯಸಭೆ ಚುನಾವಣೆಯಿಂದ (Rajyasabha Polls) ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯನ್ನು ಹಿಂಪಡೆದರು ಜೆಡಿಎಸ್‌ನ ಕುಪೇಂದ್ರರೆಡ್ಡಿ ಅವರಿಗೆ ಬೆಂಬಲಿಸಲು ಎಚ್.ಡಿ. ದೇವೇಗೌಡ (Devegowda) ಅವರು ಬಳಸಿದ್ದ ಮಲ್ಲಿಕಾರ್ಜುನ ಖರ್ಗೆ ಅಸ್ತ್ರ ವಿಫಲವಾಗಿದೆ.
News Hour ಸಿದ್ದರಾಮಯ್ಯ VS ದೇವೇಗೌಡರ ರಣತಂತ್ರ, ಬಿಜೆಪಿ ಹೊಡೆಯುತ್ತಾ ಜಾಕ್‌ಪಾಟ್..?
ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ನವ ಸಂಕಲ್ಪ ಶಿಬಿರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದರು. ಅಂತಿಮವಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪಟ್ಟಿಹ ಹೈಕಮಾಂಡ್ ಕೂಡ ಮನ್ನಣೆ ನೀಡಿದೆ. ಈ ಮೂಲಕ ದೇವೇಗೌಡರ ತಂತ್ರ ವಿಫಲವಾಗಿದೆ.