ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ, ಪಕ್ಷದಲ್ಲಿ ಉತ್ತಮ ಸ್ಥಾನಮಾ‌ನ ನೀಡಿದ್ದಾರೆ: ರಾಜೂಗೌಡ

ಬಿಜೆಪಿಯಲ್ಲಿ ಅಸಮಾಧಾನ ಇರೋದು ಸತ್ಯ. ವಿಪಕ್ಷ ನಾಯಕನ ಸ್ಥಾನ ಆಯ್ಕೆ ಆಗಬೇಕು ಎಂದು ಕೇಳಿದ್ದೇವೆ. ಬೇಗ ವಿಪಕ್ಷನಾಯಕನ ಆಯ್ಕೆಯಾದ್ರೆ ನಮಗೂ ಅನುಕೂಲ ಎಂದು ಮಾಜಿ ಶಾಸಕ ರಾಜೂಗೌಡ ಹೇಳಿಕೆ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌(DK shivakumar) ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಾಜೂಗೌಡ(Former MLA Raju Gowda) ಮಾತನಾಡಿ, ಆಪರೇಷನ್ ಆಗಲು ನನಗೆ ಕ್ಯಾನ್ಸರ್ ಆಗಿಲ್ಲ. ನನಗೆ ಕ್ಯಾನ್ಸರ್ (Cancer) ಆಗಿಲ್ಲ ಗಡ್ಡೆನೂ ಆಗಿಲ್ಲ. ಸಮಸ್ಯೆಯೂ ಆಗಿಲ್ಲ, ಡಾಕ್ಟರ್ ಅವಶ್ಯಕತೆ ಕೂಡ ಇಲ್ಲ ಎಂದು ಹೇಳಿದ್ದಾರೆ. ನಿನ್ನೆ ಸುದೀಪ್(Sudeep) ಅಣ್ಣ ಹುಟ್ಟು ಹಬ್ಬ ಇತ್ತು. ಜೆ.ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಪಾರ್ಟಿ ಇತ್ತು. ಬಿ.ಸಿ ಪಾಟೀಲ್ ಕೂಡ ಸಿಕ್ಕಿದ್ರು. ಡಿಕೆಶಿ ಅಣ್ಣಾ ಅವರೂ ಬಂದಿದ್ರು. ಅಲ್ಲಿ ಫಿಲ್ಮ್ ಪ್ರೊಡ್ಯೂಸರ್, ನಟರು ಎಲ್ಲರೂ ಇದ್ರು. ಡಿಕೆಶಿ ಅವರು ರಿಸಲ್ಟ್ ಬಗ್ಗೆ ಕೇಳಿದ್ರು.ನಾವು ಮೊದಲಿಂದಲೂ ಆತ್ಮೀಯರು. ನಾವೇ ಅವರ ಜೊತೆ ಪಾರ್ಟಿಯಲ್ಲಿ ಇದ್ದೆವು ಎಂದು ಹೇಳಿದರು.

ಪಾರ್ಟಿಯಿಂದ ಅವರು ಬೇಗನೆ ಹೊರಟ್ರು. ಸುದೀಪ್ ಅವರ ಹುಟ್ಟು ಹಬ್ಬಕ್ಕಿಂತ ಬೆಳಗ್ಗೆ ಎದ್ದ ಮೇಲೆ ನಮ್ಮದೇ ಹೆಚ್ಚು ಸುದ್ದಿಯಾಗಿದೆ. ತಮ್ಮದು ತಪ್ಪಲ್ಲ, ಆಪರೇಷನ್ ಹಸ್ತ ಅನ್ನೋ ವಿಚಾರವೇ ಹೆಚ್ಚಿದೆ. ನಾನು ಪಕ್ಷ ಬಿಡುವ ಪ್ರಶ್ನೆ ಇಲ್ಲ. ಪಕ್ಷದಲ್ಲಿ ಉತ್ತಮ ಸ್ಥಾನಮಾ‌ನ ನೀಡಿದ್ದಾರೆ. ಚುನಾವಣೆ ಅಂದ ಮೇಲೆ ಸೋಲು, ಗೆಲುವು ಇದ್ದಿದ್ದೆ. ಕಾಂಗ್ರೆಸ್‌ನಿಂದ(Congress) ಹಲವರಿಗೆ ಆಹ್ವಾನ ವಿಚಾರ, ನನಗೆ ಆಹ್ವಾನ ಬಂದಿಲ್ಲ. ರಾಜು ಚೆನ್ನಾಗಿ ಕೆಲಸ ಮಾಡಿದ್ದೆ ಹೇಗೆ ಸೋತೆ ಅಂದ್ರು. ನಿಮ್ಮ ಪ್ರಭಾವ, ಸಿದ್ದರಾಮಯ್ಯ ಅವರ ಪ್ರಭಾವ ಅಂತ ಹೇಳಿದೆ. ಈಗ ಬರುವ ಪ್ರಶ್ನೆ ಇಲ್ಲ. ಗೆದ್ದವರು ಗೆಲುವಿನ ಮಜಾ ಪಡೀತಿದ್ದಾರೆ. ನಾವು ಸೋತ ಮಜಾ ಪಡೀತಿದ್ದೇವೆ. ಗೆಲುವಿನ ಮಜವೇ ಯಾವಾಗಲೂ ಇರಬಾರದು ಎಂದು ಹೇಳಿದರು.

ಇದನ್ನೂ ವೀಕ್ಷಿಸಿ: ನಾನು ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ, ನಮ್ಮ ಪಕ್ಷವೇ ಬೇರೆ ಅವರ ಪಕ್ಷವೇ ಬೇರೆ: ಬಿ.ಸಿ.ಪಾಟೀಲ್‌

Related Video