ನಾನು ಮತ್ತೆ ಕಾಂಗ್ರೆಸ್‌ಗೆ ಹೋಗಲ್ಲ, ನಮ್ಮ ಪಕ್ಷವೇ ಬೇರೆ ಅವರ ಪಕ್ಷವೇ ಬೇರೆ: ಬಿ.ಸಿ.ಪಾಟೀಲ್
ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ತಮ್ಮ ಕ್ಷೇತ್ರದ ಅಭಿವೃದ್ದಿ ಕೆಲಸಕ್ಕಾಗಿ ಕಾಂಗ್ರೆಸ್ ಭೇಟಿ ಮಾಡಿದ್ದಾರಷ್ಟೆ. ಬಿಜೆಪಿಯಲ್ಲಿ ಬೇಸರವಿಲ್ಲ, ಕಾಂಗ್ರೆಸ್ ನವ್ರು ಯಾರೂ ಕೂಡ ನನ್ನನ್ನು ಮಾತಾಡಿಸಿಲ್ಲ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತ ವಿಚಾರ ಭಾರೀ ಸದ್ದು ಮಾಡುತ್ತಿದೆ. ಕಿಚ್ಚ ಸುದೀಪ್ ಬರ್ತ್ ಡೇ ಪಾರ್ಟಿಯಲ್ಲಿ ಡಿ.ಕೆ.ಶಿವಕಮಾರ್, ಬಿ.ಸಿ. ಪಾಟೀಲ್ ಮತ್ತು ರಾಜೂಗೌಡ ಅವರ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಬಿ.ಸಿ. ಪಾಟೀಲ್(BC Patil) ಮಾತನಾಡಿ, ನಾನು ಮತ್ತೆ ಕಾಂಗ್ರೆಸ್‌ಗೆ(Congress) ಹೋಗಲ್ಲ ಎಂದಿದ್ದಾರೆ. ನಮ್ಮ ಪಕ್ಷವೇ ಬೇರೆ ಅವರ ಪಕ್ಷವೇ ಬೇರೆ. ಕಾಂಗ್ರೆಸ್‌ಗೆ ಹೋಗ್ತೇನೆ ಅನ್ನೋದು ಸುಳ್ಳು. ಸುದೀಪ್(Sudeep) ಹುಟ್ಟುಹಬ್ಬ ಹಿನ್ನೆಲೆ ಡಿಕೆಶಿ ಬಂದಿದ್ರು. ನಾನು, ರಾಜೂಗೌಡ ಹೋಗಿದ್ವಿ. ನಾನು ಡಿಕೆಶಿ ಮೊದಲಿನಿಂದಲೂ ಸ್ನೇಹಿತರು, ಚುನಾವಣೆ ಬಳಿಕ ಡಿಕೆಶಿಯನ್ನು ನೋಡಿರಲಿಲ್ಲ. ಸೌಜನ್ಯಕ್ಕೆ ಮಾತನಾಡಿದ್ದೇವೆ ಅಷ್ಟೇ ಎಂದು ಹೇಳಿದರು. ಇದು ಆಕಸ್ಮಿಕ ಭೇಟಿ, ಬೇರೆ ಅರ್ಥ ಕಲ್ಪಿಸೋದು ಬೇಡ. ಡಿಸಿಎಂ ಸಿಕ್ಕಾಗ ಮುಖ ತಿರುಗಿಸಿ ಹೋಗೋದು ಸರಿಯಲ್ಲ. ಕನಸಲ್ಲೂ ಬಿಜೆಪಿ(BJP) ಬಿಡುವ ಬಗ್ಗೆ ಯೋಚಿಸಿಲ್ಲ. ಹಾವೇರಿಯಲ್ಲಿ ಯಾರಿಗೆ ಟಿಕೆಟ್ ಕೊಟ್ರೂ ಕೆಲಸ ಮಾಡ್ತೇವೆ. ಅವ್ರು ಯಾವ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಅನ್ನೋ ಅನುಮಾನ ಬರ್ತಿದೆ. ನಮ್ಮ ಬೆಂಬಲಿಗರು ಯಾರೂ ಕೂಡ ಕಾಂಗ್ರೆಸ್‌ಗೆ ಹೋಗಿಲ್ಲ, ಊಹಾಪೋಹವಷ್ಟೆ ಎಂದು ಹೇಳಿದರು.
ಇದನ್ನೂ ವೀಕ್ಷಿಸಿ: ‘ಚಂದು’ ಸಿನಿಮಾದಲ್ಲಿ ‘ಕಿಚ್ಚ’ನ ‘ತುಂಟಾಟ’..! ಕರುನಾಡಿನ ಪಾಲಿಗೆ ‘ಪಾರ್ಥ’ನೆ ‘ಸ್ವಾತಿಮುತ್ತು’..!